ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಭೆಗೆ ಸೀಮಿತವಾದ ಸ್ಮಾರ್ಟ್ ಸಿಟಿ ಯೋಜನೆ : ಸಾರ್ವಜನಿಕರಿಗೆ ಸಿಗದ ಲಾಭ

ಸ್ಮಾರ್ಟ್ ಸಿಟಿ ಯೋಜನೆ ಬಂದು ಅವಳಿನಗರ ಸ್ಮಾರ್ಟ್ ಆಗುತ್ತೇ ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ. ಹುಬ್ಬಳ್ಳಿ ಧಾರವಾಡವನ್ನು ಸ್ಮಾರ್ಟ್ ಮಾಡುವ ಬದಲು ಮಾಲಿನ್ಯ ಸಿಟಿಯಾಗಿ ಮಾಡಿದ್ದಾರೆ. ಅಲ್ಲದೆ ಮಹತ್ವದ ಯೋಜನೆ ಸಭೆ ಹಾಗೂ ಚರ್ಚೆಗೆ ಸೀಮಿತವಾಗಿದೆ ಎಂಬುವಂತಾಗಿದೆ. ಸದ್ಯ ಅವಳಿ ನಗರದಲ್ಲಿ ಅವಧಿ ಪೂರ್ಣಗೊಂಡರು ಬಹುತೇಕ ಕಾಮಗಾರಿ ಮುಕ್ತಾಯಗೊಂಡಿಲ್ಲ.

ಹೌದು ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಸ್ಮಾರ್ಟ್ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ತರಲಾಗಿದೆ. ಆದರೆ ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಗೆ ಮಾತ್ರ ಸೀಮಿತವಾಗಿದೆ ಎನ್ನುವ ಮಾತುಗಳು ಸಾಮಾನ್ಯವಾಗಿವೆ.

ಕೇಂದ್ರ ಸಚಿವರು ಹಾಗೂ ಮಾಜಿ ಸಿಎಂ ಪ್ರತಿನಿಧಿಸುವ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಾದ ಹುಬ್ಬಳ್ಳಿ- ಧಾರವಾಡದಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡರು ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅಲ್ಲದೇ ಕೆಲವೊಂದು ಕಾಮಗಾರಿ ಪೂರ್ಣಗೊಂಡರು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ.

ಇನ್ನೂ ಸ್ಮಾರ್ಟ್ ಸಿಟಿಯ ಯೋಜನೆಯ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯೇ ಲಭ್ಯವಾಗುತ್ತಿಲ್ಲ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹ್ಮದ ಅವರ ಸಂಪರ್ಕವಂತೂ ಕನಸಿನ ಮಾತಾಗಿದೆ.

ಎಲ್ಲೆಂದರಲ್ಲಿ ಅಗೆದಿರುವ ರಸ್ತೆಗಳು ಸರಿಯಾದ ಸಮಯಕ್ಕೆ ಮುಗಿಯದ ಕಾಮಗಾರಿಯಿಂದ ಈಗ ಅವಳಿನಗರ ರಾಜ್ಯದ ವಾಯುಮಾಲಿನ್ಯದ ನಗರದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿರುವುದು ಇಲ್ಲಿನ ಜನರ ದುರಾದೃಷ್ಟವೇ ಸರಿ.

ಒಟ್ಟಿನಲ್ಲಿ ಚುರುಕುಗೊಳ್ಳದ ಕಾಮಗಾರಿಯಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಸಭೆಗೆ ಸೀಮಿತವಾದ ಯೋಜನೆಯಾಗಿದೆ. ಈ ಬಗ್ಗೆ ಮಳೆಗಾಲ ಆರಂಭದ ಮುನ್ನವೇ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/04/2022 01:16 pm

Cinque Terre

63.67 K

Cinque Terre

7

ಸಂಬಂಧಿತ ಸುದ್ದಿ