ಧಾರವಾಡ: ಧಾರವಾಡ ನಗರದ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕಳೆದ 2 ವರ್ಷಗಳಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕ ಅಮೃತ ದೇಸಾಯಿ ಅವರಿಂದಾದ ಅಭಿವೃದ್ಧಿ ಕಾಮಗಾರಿಗಳ ಕುರಿತ 'ಸವಾಲುಗಳ ಎರಡು ವರ್ಷಗಳ ಮಧ್ಯೆಯೂ ನಿಲ್ಲದ ಸೇವಕನ ಅಭಿವೃದ್ಧಿ ಪರ್ವ' ಎಂಬ ಕೈಪಿಡಿ ಬಿಡುಗಡೆ ಮಾಡಿದರು.
ತಾವು ಮಾಡಿದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ ಶಾಸಕ ಅಮೃತ ದೇಸಾಯಿ, ಸಣ್ಣ ನೀರಾವರಿ ಇಲಾಖೆಯಿಂದ 13 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂ, ಬಿಸಿಬಿ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿ, ಶಾಲೆಗಳಿಗೆ ಡೆಸ್ಕ್, ಸ್ಮಾರ್ಟ್ ಬೋರ್ಡ್, ವಿವಿಧ ಕಲಿಕಾ ಸಾಮಗ್ರಿಗಳ ವಿತರಣೆ, 1.40 ಕೋಟಿ ಅನುದಾನದಲ್ಲಿ ಬೋಗೂರು, ಬೇಲೂರ ಸೇರಿ ಏಳು ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
1 ಕೋಟಿ ಅನುದಾನದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ, ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ 49.48 ಕೋಟಿ ಪರಿಹಾರ ವಿತರಣೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ಹಾಗೂ ಹಾಳಾದ ಮನೆಗಳಿಗೆ ಅಂದಾಜು 23.5 ಕೋಟಿ ಪರಿಹಾರ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ತುಪ್ಪರಿಹಳ್ಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಯೋಜನೆಯ ಸಮೀಕ್ಷಾ ಕಾರ್ಯಕ್ಕೆ ಅಂದಾಜು 50 ಲಕ್ಷ ಬಿಡುಗಡೆಗೊಂಡಿದೆ. ಯೋಜನಾ ವರದಿ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.
Kshetra Samachara
22/11/2020 02:00 pm