ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಮರಗೋಳದ ಸರ್ಕಾರಿ ಶಾಲೆಗೆ ನವಲಗುಂದ ಕಾಂಗ್ರೆಸ್ ನಾಯಕರ ಭೇಟಿ

ನವಲಗುಂದ: ಕಳೆದ ವಾರ ಸುರಿದ ಭಾರೀ ಮಳೆಗೆ ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದ ಶ್ರೀ ಅಡಿವೆಪ್ಪಗೌಡ ಶಿದ್ದನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ನೀರು ನುಗ್ಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ರು. ಈ ಹಿನ್ನೆಲೆಯಲ್ಲಿ ನವಲಗುಂದ ಕಾಂಗ್ರೆಸ್ ಮುಖಂಡರು ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ರು.

ಹಳ್ಳ ಉಕ್ಕಿ ಬಂದ ಕಾರಣದಿಂದ ಸರ್ಕಾರಿ ಪ್ರೌಢಶಾಲೆಯ ಆವರಣ ಸಂಪೂರ್ಣ ಜಲಾವೃತಗೊಂಡಿತ್ತು. ಇದರಿಂದಾಗಿ ಸುಮಾರು 150 ವಿದ್ಯಾರ್ಥಿಗಳು ಮನೆಗಳಿಗೆ ತೆರಳಲಾಗದೆ ಶಾಲೆಯಲ್ಲೇ ಸಿಲುಕುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಹ ಭೇಟಿ ನೀಡಿ, ಸ್ಥಳ ವೀಕ್ಷಣೆ ಮಾಡಿದ್ದಾರೆ.

ಈಗ ನವಲಗುಂದ ಮಾಜಿ ಶಾಸಕ ಎನ್. ಹೆಚ್ ಕೋನರಡ್ಡಿ ಹಾಗೂ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಸೇರಿದಂತೆ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಜೀವನ ಪವಾರ, ಶಿವಾನಂದ ತಡಸಿ, ಮೋದಿನ ಶಿರೂರ್, ಮಾಂತೇಶ ಭೋವಿ, ಕಲ್ಲಪ್ಪ ಹುಬ್ಬಳ್ಳಿ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಧೈರ್ಯ ತುಂಬಿದರು.

Edited By : Somashekar
Kshetra Samachara

Kshetra Samachara

21/06/2022 03:44 pm

Cinque Terre

26.02 K

Cinque Terre

1

ಸಂಬಂಧಿತ ಸುದ್ದಿ