ಧಾರವಾಡ: 14 ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಮಾಹಿತಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಗ್ರಾಮಸ್ಥರು ಧಾರವಾಡ ತಾಲೂಕು ಪಂಚಾಯ್ತಿ ಇಓ ಖಾದ್ರೊಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ಕ್ರಿಯಾಯೋಜನೆ ಮಾಹಿತಿ ನೀಡಲು ಹಲವು ದಿನಗಳಿಂದ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದರು. ಗ್ರಾಮ ಪಂಚಾಯ್ತಿ ಪಿಡಿಓ ಮಾಹಿತಿ ನೀಡಿರಲಿಲ್ಲ. ಇಂದು ಮನಸೂರು ಗ್ರಾಮಕ್ಕೆ ಬಂದ ಖಾದ್ರೊಳ್ಳಿ ಅವರಿಗೆ ಮಾಹಿತಿ ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಪಿಡಿಓ ಅವರಿಗೆ ಮಾಹಿತಿ ಕೊಡಲು ಹೇಳಿದ್ದೇನೆ ಅವರು ಕೊಡದೇ ಇದ್ದರೆ ಪಂಚಾಯ್ತಿಗೆ ಬೀಗ ಹಾಕಿ ಎಂದು ತಾಲೂಕು ಪಂಚಾಯ್ತಿ ಇಓ ಅವರು ಹೇಳಿದ್ದರಿಂದ ಕೋಪಗೊಂಡ ಗ್ರಾಮಸ್ಥರು ನೀವೇ ಹೀಗೇ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಎಂದರೆ ಹೇಗೆ ಎಂದು ಇಓ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
Kshetra Samachara
03/10/2020 06:56 pm