ಕುಂದಗೋಳ : ತಾಲೂಕಿನಲ್ಲಿ ರೈತರು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಅದೆಷ್ಟೋ ರಸ್ತೆಗಳು ಅಭಿವೃದ್ಧಿ ಕಾಣದೆ ಅವ್ಯವಸ್ಥೆ ಹಾದಿ ಹಿಡಿದಿವೆ.
ಈ ಬಗ್ಗೆ ಮೊನ್ನೆ ತಾನೇ ಹಿರೇಹರಕುಣಿ ಗ್ರಾಮದ ರೈತರು ತಮ್ಮ ರಸ್ತೆ ಅಭಿವೃದ್ಧಿಗಾಗಿ ಪಂಚಾಯಿತಿ, ಪಿಡಿಓ, ಲೋಕೋಪಯೋಗಿ ಇಲಾಖೆ, ಅಷ್ಟೇ ಯಾಕೆ ಸ್ವತಃ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನ ಸಿಗದೆ, ತಮ್ಮೂರಿನ 5 ಕಿಮೀ ಹಾಲಕೇರಿ ರಸ್ತೆಗೆ ಸ್ವತಃ ಗ್ರಾಮಸ್ಥರೇ ವಂತಿಗೆ ಹಣ ಸಂಗ್ರಹಿಸಿ ತಮ್ಮ ತಮ್ಮ ಟ್ರ್ಯಾಕ್ಟರ್ ಬಳಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಕೊಂಡಿದ್ದರು.
ಈ ವರದಿಯನ್ನ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಈ ಬಗ್ಗೆ ಇಂದು ಪಬ್ಲಿಕ್ ನೆಕ್ಷ್ಟ ಗೆ ಪ್ರತಿಕ್ರಯಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ ಎನು ಹೇಳಿದ್ದಾರೆ ನೀವೆ ಕೇಳಿ.
ಕೇಳಿದ್ರಲ್ಲಾ ಒಟ್ಟಾರೆ ಗ್ರಾಮಸ್ಥರು ಮಾಡಿದ ಕೆಲಸವನ್ನು ಮೆಚ್ಚಿದ ಶಾಸಕಿ, ಕೊರೊನಾ ಕಾರಣ ಅಭಿವೃದ್ಧಿ ಹಿಂದುಳಿದಿದೆ.
ಶೀಘ್ರದಲ್ಲೇ ಹಿರೇಹರಕುಣಿ ಗ್ರಾಮಗಳ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ.
Kshetra Samachara
23/11/2020 04:24 pm