ಕುಂದಗೋಳ : ಪ್ರಸಕ್ತ ಮುಂಗಾರು ಮಳೆ ಚೆನ್ನಾಗಿ ಸುರಿದಿದ್ದು ಶಾಸಕಿ ಕುಸುಮಾವತಿ ಶಿವಳ್ಳಿ ಇಂದು ದಿಡೀರ್ ಸಂಶಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ ಗೊಬ್ಬರ ವಿತರಣೆ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.
ಹೌದು ! ಸಂಶಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿ ನೇತೃತ್ವದಲ್ಲಿ ಭೇಟಿ ನೀಡಿದ ಅವರು ಬೀಜ ಗೊಬ್ಬರ ವಿತರಣೆ ಹಾಗೂ ಬೀಜ ಗೊಬ್ಬರ ಸಂಗ್ರಹ ಪ್ರಮಾಣ ಪರಿಶೀಲಿಸಿ ರೈತರಿಗೆ ಸರಿಯಾಗಿ ಪೂರೈಕೆ ಮಾಡುವಂತೆ ತಿಳಿಸಿದರು. ಹೆಸರು ಬೇಡಿಕೆ ಹೆಚ್ಚಾಗಿದ್ದು ಹೆಚ್ಚಿನ ಆಮದಿಗೆ ಸೂಚಿನೆ ನೀಡಿದರು.
ಬಳಿಕ ಸಂಶಿ ಗ್ರಾಮದ ಪುರಾತನ ಗುಹೆ ಕಳೆದ ಹಲವಾರು ದಿನಗಳಿಂದ ಹಂತ ಹಂತವಾಗಿ ಕುಸಿಯುತ್ತಿದ್ದು ಅಕ್ಕಪಕ್ಕದ ನಿವಾಸಿಗಳಿಗಳಲ್ಲಿ ಭಯ ಹೆಚ್ಛಾಗಿದೆ.
ಈ ವಿಷಯ ತಿಳಿದ ಶಾಸಕಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಕುಸಿಯುತ್ತಿರುವ ಗುಹೆ ಬಗ್ಗೆ ವರದಿ ಪಡೆದು ಆತಂಕ ಎದುರಾದಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ತಿಳಿಸಿದರು.
Kshetra Samachara
03/06/2022 04:07 pm