ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೈತನಿಗೆ ಮೋಸ ಮಾಡಿರುವ ಕೆಇಬಿ ಅಧಿಕಾರಿಗಳು..!

ಕಲಘಟಗಿ: ರೈತನ ಹೊಲಕ್ಕೆ ವಿದ್ಯತ್ ನೀಡದೇ ಕೆಇಬಿ ಮೋಸ ಮಾಡಿದ ಘಟನೆ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಮಳಲಿ ಎಂಬ ರೈತನಿಗೆ ಕೆಇಬಿ ಅಧಿಕಾರಿಗಳು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

2017 ರಲ್ಲಿ ರೈತ ಬಸವರಾಜ್ ಮಳಲಿ ಸಾಲಸೋಲ ಮಾಡಿ ತನ್ನ ಹೊಲದಲ್ಲಿ ಬೋರ್ ವೆಲ್ ಕೊರೆಸಿದ್ದಾನೆ.ನಂತರ ಅದಕ್ಕೆ ಕರೆಂಟ್ ಸಪ್ಲೈ ಕೊಡಲು ಹೆಸ್ಕಾಂ ಅಧಿಕಾರಿಗಳಿಗೆ ಅರ್ಜಿ ನೀಡಿದ್ದಾನೆ. ಅದರಂತೆ ಆತನಿಗೆ ವಿದ್ಯುತ್ ನೀಡಲು ಸರ್ಕಾರಕ್ಕೆ ಚಲನ್ ಮೂಲಕ ಹಣ ತುಂಬಿ ನಂತರ ವಿದ್ಯುತ್ ಸಂಪರ್ಕ ಕೊಡಲಾಗುವುದು ಎಂದಿದ್ದಾರೆ. ಅದರಂತೆ ರೈತ ಬಸವರಾಜ್ 16,000 ರೂ. ಚಲನ್ ತುಂಬಿದ್ದಾರೆ. ಆದ್ರೆ ಇಲ್ಲಿಯವರೆಗೆ ಕರೆಂಟ್ ಮಾತ್ರ ಕನೆಕ್ಟ್ ಆಗಿಲ್ಲ.

ಸದ್ಯ ಕರೆಂಟ್ ಸಪ್ಲಾಯ ಇಲ್ಲದಕ್ಕೆ ಬಸವರಾಜ್ ಮಳಲಿ ಅವರ ಮೂರು ಎಕರೆ ಹೊಲ ಉಪಯೋಗಕ್ಕೆ ಬಾರದಂತಾಗಿದೆ. ಮಳೆಗಾಲದಲ್ಲಿ ಕೇವಲ ಗೋವಿನಜೋಳ ಹಾಕಿದ್ದು,ಬಿಟ್ಟರೇ ಹೊಲಕ್ಕೆ ಪಾಳು ಬಿದ್ದಿದೆ. ಇನ್ನು ರೈತ ಕಳೆದ ಆರು ವರ್ಷಗಳ ಕಾಲ ಕೆಇಬಿ ಕಚೇರಿಗೆ ಅಲೆದಾಟ ನಡೆಸಿದ್ರು ಕೂಡ ಯಾವುದೇ ಪ್ರಯೋಜವಾಗಿಲ್ಲಾ ಹೀಗಾಗಿ ನಮಗೆ ಕರೆಂಟ್ ನೀಡಿ ಎಂದು ಅನ್ನದಾತ ಅಂಗಲಾಚಿದ್ದಾರೆ.

ಮಾತ್ರವಲ್ಲದೆ ಕರೆಂಟ್ ನೀಡಲು ಈಗಾಗಲೇ ಕೆಇಬಿ ಅಧಿಕಾರಿಗಳು 20,000 ರೂ ಗಳ ವಸೂಲಿ ಮಾಡಿದ್ದಾರೆಂದು ರೈತ ಆರೋಪ ಮಾಡುತ್ತಿದ್ದು,ತಕ್ಷಣವೇ ನನಗೆ ಕರೆಂಟ್ ನೀಡಿ ಜಮೀನಿನಲ್ಲಿ ಎನಾದ್ರೂ ವ್ಯವಸಾಯ ಮಾಡಿ ಕೊಡಿ ಎಂದಿದ್ದಾರೆ.

ಈ ವೇಳೆ ರೈತನ ಜೊತೆ ಗ್ರಾಮ ಪಂಚಾಯತಿ ಸದಸ್ಯರು ಇದ್ದರು.

Edited By : Nagesh Gaonkar
Kshetra Samachara

Kshetra Samachara

24/01/2022 06:53 pm

Cinque Terre

31.35 K

Cinque Terre

7

ಸಂಬಂಧಿತ ಸುದ್ದಿ