ಧಾರವಾಡ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ಧಾರವಾಡದ ಯುವಕ ವಿಜೇತ್‌ಕುಮಾರ್ ಹೊಸಮಠ ಅವರು ದೇಶದಾದ್ಯಂತ ಬೈಕ್ ರೈಡ್ ಮಾಡಿ ಇದೀಗ ವಾಪಸ್ ಧಾರವಾಡಕ್ಕೆ ಬಂದಿದ್ದಾರೆ.
ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯ ಧ್ವಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಬೈಕ್ ರೈಡ್ ಉದ್ದೇಶವಾಗಿತ್ತು. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾದ ವಿಜೇತ್, ಧಾರವಾಡದ ಕಾರ್ಗಿಲ್ ಸ್ತೂಪವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿ ಎಂದು ಮನವಿ ಕೂಡ ಸಲ್ಲಿಸಿದ್ದಾರೆ.
ಧಾರವಾಡದಿಂದ ಹೊರಟಿದ್ದ ವಿಜೇತ್, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಕ್, ಉತ್ತರ ಪ್ರದೇಶ ಸೇರಿದಂತೆ 22 ರಾಜ್ಯಗಳಲ್ಲಿ ಸಂಚರಿಸಿ ವಾಪಸ್ ಧಾರವಾಡಕ್ಕೆ ಬಂದು ತಲುಪಿದ್ದಾರೆ.
Kshetra Samachara
19/09/2022 08:58 pm