ಧಾರವಾಡ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 72ರ ಸಂಭ್ರಮ. ಅವರ ಹುಟ್ಟು ಹಬ್ಬದ ಅಂಗವಾಗಿ ಇಡೀ ದೇಶದಲ್ಲಿ ರಕ್ತದಾನ ಶಿಬಿರ, ಅನ್ನದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಧಾರವಾಡದಲ್ಲೂ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಭಿನ್ನ ರೀತಿಯಲ್ಲಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಧಾರವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ ಮಂಜುನಾಥ ಹಿರೇಮಠ ಅವರು 8 ಕೆಜಿ ರಂಗೋಲಿಯಲ್ಲಿ ಮೋದಿ ಅವರ ಭಾವಚಿತ್ರ ಬಿಡಿಸಿದ್ದಾರೆ. 72 ಎಂದು ಬರೆದು ಅದರಲ್ಲೇ ನರೇಂದ್ರ ಮೋದಿ ಅವರ ಚಿತ್ರ ಬಿಡಿಸಿ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ. ಒಟ್ಟು 7 ಫೀಟ್ 2 ಇಂಚಿನಲ್ಲಿ ಥೇಟ್ ನರೇಂದ್ರ ಮೋದಿಯಂತಿರುವ ಈ ಚಿತ್ರ ಬಿಡಿಸಿ ಹಿರೇಮಠ ಗಮನಸೆಳೆದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 02:35 pm