ಹುಬ್ಬಳ್ಳಿ : ಡಾ.ಮಲ್ಲನಗೌಡ ಪಾಟೀಲ್ ಮುನೇನಕೊಪ್ಪ (69) ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹೋದರ, ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ಇಂದು (ಬುಧವಾರ) ಇಹಲೋಕ ತ್ಯಜಿಸಿದ್ದಾರೆ. ನವಲಗುಂದ ತಾಲೂಕಿನ ಅಮರಗೋಳ ಮೂಲದ ಡಾ.ಮಲ್ಲನಗೌಡ ಪಾಟೀಲ್ ಅನಾರೋಗ್ಯದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಮೃತರ ಇಚ್ಚೆಯಂತೆ ಅವರ ನೇತ್ರಗಳನ್ನು ಹುಬ್ಬಳ್ಳಿಯ ಡಾ.ಎಂ.ಎಂ.ಜೋಷಿ ನೇತ್ರ ಭಂಡಾರಕ್ಕೆ ದಾನ ಮಾಡಲಾಗಿದೆ. ಅದೇ ರೀತಿ ಅವರು ವಿದ್ಯಾಭ್ಯಾಸ ಮಾಡಿದ ಕಿಮ್ಸ್ ವೈದ್ಯಕೀಯ ಕಾಲೇಜಿಗೆ ಮೃತದೇಹವನ್ನು ಕುಟುಂಬಸ್ಥರು ಹಸ್ತಾಂತರಿಸಲಿದ್ದಾರೆ. ಇಂದು ಮಧ್ಯಾಹ್ನದಿಂದ ಸಂಜೆವರೆಗೆ ಹುಬ್ಬಳ್ಳಿಯ ವಿಜಯನಗರದ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.
Kshetra Samachara
14/09/2022 03:24 pm