IAS, IPS KAS ಆಗಬೇಕೆಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಹೌದು ಆದರೆ ದೇಶದ ಅತ್ಯಂತ ಪ್ರತಿಷ್ಠಿತ UPSC ಸ್ಪರ್ಧಾತ್ಮಕ ಪರೀಕ್ಷೆಗಳು ಅಷ್ಟೇ ಕಠಿಣ. ಗ್ರಾಮೀಣ ವಿದ್ಯಾರ್ಥಿಗಳಿಗಂತೂ ಕಬ್ಬಿಣದ ಕಡಲೆ. ಉತ್ತರ ಕರ್ನಾಟಕದ ಕನ್ನಡ ಮಾಧ್ಯಮದವರಿಗೆ ಭಾಷಾ ಕೀಳರಿಮೆ. ಇವೆಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತವರು ಅನೇಕ.
ಸ್ಪಷ್ಟ ಗುರಿ, ನಿರಂತರ ಓದು, ಸೂಕ್ತ ಮಾರ್ಗದರ್ಶನ, ಕುಟುಂಬದವರ ಸಹಕಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಉತ್ತಮ ಹವ್ಯಾಸ ಬೆಸಿಕೊಂಡರೆ ಗಗನ ಕುಸುಮವೆಂಬ ಈ ಪರೀಕ್ಷೆಗಳು ಸುಲಭ. ಇದೇ ಮಾರ್ಗ ಅನುಸರಿಸಿ ಐಎಎಸ್, ಐಪಿಎಸ್, ಕೆಎಎಸ್ ಆಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅನೇಕರು ನಮ್ಮ ಮಧ್ಯದಲ್ಲಿದ್ದಾರೆ.
ಅವರೆಲ್ಲರ ಯಶೋಗಾಥೆ, ನಡೆದು ಬಂದ ದಾರಿ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ನೀಡುವವರಿಗೆ ಪ್ರೇರಣೆಯಾಗಲಿ ಎಂದ ಉದ್ದೇಶದಿಂದ ನಿಮ್ಮ PublicNext, ಮಾಧ್ಯಮ ದಿ. ಕ್ಲಾಸಿಕ್ ಸ್ಟಡಿ ಸರ್ಕಲ್ ಧಾರವಾಡ ಇವರ ಪ್ರಾಯೋಜಕತ್ವದಲ್ಲಿ " ಪ್ರೇರಣಾ '' ಎಂಬ ಕಾರ್ಯಕ್ರಮದ ಆರಂಭಸಿದೆ. ಪಬ್ಲಿಕ್ ನೆಕ್ಸ್ಟ್ ನಡೆಸಿದ ಸಂದರ್ಶನಗಳಲ್ಲಿ ಧಾರವಾಡ ಜಿಲ್ಲೆಯ ಐಎಎಸ್, ಐಪಿಎಸ್ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಪರೀಕ್ಷೆಗಳಿಗೆ ಭಾಷೆ ಬೇಲಿಯಲ್ಲ ಎಂದು ಹೇಳುತ್ತಾರೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಬಡ ಕೃಷಿಕ ಕುಟುಂಬದಿಂದ ಬಂದ ಮಾಧವ ವಿ. ಗಿತ್ತೆ. ಮರಾಠಿ ಮಾಧ್ಯಮದಲ್ಲಿ ಕಲಿತ ಇವರು ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾಗಿದ್ದಾರೆ, ಹೊಲದಲ್ಲಿ ಕೃಷಿ ಕಾರ್ಮಿಕನಾಗಿ ದುಡಿದು ಓದಿದ ಶ್ರಮ ಜೀವಿ ಇವರು.
ನಾವು ಐಎಎಸ್ ಐಪಿಎಸ್ ಅಧಿಕಾರಿಗಳಾಗುವುದು ಮುಖ್ಯವಲ್ಲ, ನಾವು ಹುದ್ದೆ ಅಲಂಕರಿಸಿದ ನಂತರ ಸಮಾಜಕ್ಕೆ ನೀಡುವ ಸೇವೆ, ಜನತೆ ನೋವಿಗೆ ಸ್ಪಂದಿಸುವುದು ಮುಖ್ಯ ಎನ್ನುತ್ತಾರೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಡಿ. ಭಾರತಿ.
ಅದೇ ರೀತಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಕಮಿಶ್ನನರ್ ಲಾಬೂರಾಮ್, ಮಹಾನಗರ ಪಾಲಿಕೆ ಆಯುಕ್ತ ಡಾ: ಗೋಪಾಲಕೃಷ್ಣ ಬಿ, ಸುರೇಶ್ ಇಟ್ನಾಳ (ನಿರ್ಗಮಿತ ) ತಮ್ಮ ಅನುಭವ ಹಂಚಿಕೊಂಡಿದ್ದಾರಲ್ಲದೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ವಿವಿಧ ಪರೀಕ್ಷೆಗಳಿಗಾಗಿ ಅಧಿಸೂಚನೆ ಹೊರಡಿಸಿದ್ದು ಜೂನ್ 5 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಈ ನಮ್ಮ ಸಂದರ್ಶನಗಳು ಅಭ್ಯರ್ಥಿಗಳಿಗೆ ಸ್ಫೂರ್ತಿದಾಯಕವಾಗುದರಲ್ಲಿ ಸಂದೇಹವಿಲ್ಲ. ಅದೇ ರೀತಿ ದಿ. ಕ್ಲಾಸಿಕ್ ಸ್ಟಡಿ ಸರ್ಕಲ್ ಧಾರವಾಡ ನಿಮಗೆ ಸೂಕ್ತ ಮಾರ್ಗದರ್ಶನ ನೀಡಲಿದೆ.
ಬನ್ನಿ... ಅವರಿಂದಲೇ ಕೇಳೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/03/2022 10:49 am