ಕುಂದಗೋಳ : ಜನಸಂಖ್ಯೆ ನಿಯಂತ್ರಣದ ಜೊತೆಗೆ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೂ ಸರ್ಕಾರಗಳು ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ ಜನ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಯರಗುಪ್ಪಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜನಸಂಖ್ಯೆ ಹತೋಟಿಗೆ ಸರ್ಕಾರ ನೀಡಿದ ಯೋಜನೆ ಅನುಸರಿಸಿ ಎಂದರು.
ವಿಶ್ವದ ಜನಸಂಖ್ಯೆ ಸ್ಫೋಟದಲ್ಲಿ ಚೀನಾ ಮತ್ತು ಭಾರತದಲ್ಲಿ ಶೇ.40 ರಷ್ಟು ಹೆಚ್ಚಿನ ಪ್ರಮಾಣ ದಾಖಲಾಗುತ್ತಿದೆ. ಆದರೆ ಚೀನಾ ಜನಸಂಖ್ಯಾ ನಿಯಂತ್ರಣ ಕುರಿತು ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳು ಭಾರತಕ್ಕೂ ಮನದಟ್ಟಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖಂಡ ಅಡಿವೆಪ್ಪ ಶಿವಳ್ಳಿ, ಮಹಾಂತೇಶ ತಡಸದ, ತಾಲೂಕು ವೈದ್ಯಾಧಿಕಾರಿ ಭಾಗಿರಥಿ ಮಡ್ಲೆರಿ, ಯರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಸಂಜನಾ ಬಗಲಿ, ಕ್ಷೇತ್ರ ಶಿಕ್ಷಣ ಆರೋಗ್ಯ ಅಧಿಕಾರಿಗಳು ರೂಪಾ ತುರಮುರಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
26/08/2022 07:18 pm