ನವಲಗುಂದ : ವಿಶ್ವಯೋಗ ದಿನಾಚರಣೆಯ ಅಂಗವಾಗಿ ಭಾರತೀಯ ಜನತಾ ಪಕ್ಷ ನವಲಗುಂದ ನಗರ ಘಟಕ ವತಿಯಿಂದ ನವಲಗುಂದ ಪಟ್ಟಣದ ಹುರಕಡ್ಲಿ ಅಜ್ಜನ ಮಠದಲ್ಲಿ ಯೋಗಾಸನ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ವಿಶ್ವಯೋಗ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಬಸವ ಯೋಗಕೇಂದ್ರ ಅಧ್ಯಕ್ಷರಾದ M S ಸಿರಿಯನವರ, ಪಕ್ಷದ ಹಿರಿಯರಾದ ರಾಯನಗೌಡ ಪಾಟೀಲ, ಮಲಪ್ಪ ಕಿರೆಸೂರ, ಸಾಯಿಬಾಬಾ ಆನೆಗುಂದಿ, ಪುರಸಭೆ ಸದಸ್ಯರಾದ ಮಹಾಂತೇಶ ಕಲಾಲ, ಶರಣಪ್ಪ ಹಕ್ಕರಕಿ, ಬಸವರಾಜ ಕಟ್ಟಿಮನಿ, ಪುರಸಭೆ ನಾಮನಿರ್ದೇಶನ ಸದಸ್ಯರಾದ ಬಸವರಾಜ ಕಾತರಕಿ, M B. ತೋಟಿ, ಅಡಿವೇಪ ಶಿರಸಂಗಿ, ಹಾಗೂ ಈರಣ್ಣ ಚವಡಿ, ನೇತಾಜಿ ಕಲಾಲ, ಮಾರುತಿ ಗೊಲ್ಲರ, ಸಿದ್ಧಪ್ಪ ಜನ್ನರ ಪರಶುರಾಮ ಗುಳೇದ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
21/06/2022 12:14 pm