ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಐಐಟಿಯನ್ನು ಧಾರವಾಡಲ್ಲಿ ಪ್ರಾರಂಭ ಮಾಡಿದ್ದು, ಅಂತಹದ್ದೇ ಮತ್ತೊಂದು ಕಾಲೇಜು ವಾಣಿಜ್ಯ ನಗರಿ ಪಾಲಾಗಿದೆ. ದೇಶದ ಪ್ರತಿಷ್ಠಿತ ಏಮ್ಸ್ ಕಾಲೇಜು ಕೂಡ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಬರುತ್ತಿರುವುದಕ್ಕೆ ಈ ಭಾಗದ ಜನರಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಇಲ್ಲಿಯವರೆಗೆ ಕಾಲೇಜು ಸ್ಥಾಪನೆ ವಿಚಾರ ಕೇವಲ ಹೇಳಿಕೆಯಾಗಿ ಉಳಿದಿರೋದು, ಇಲ್ಲಿನ ಜನರ ಬೇಸರಕ್ಕೆ ಕಾರಣವಾಗಿದೆ.
ಹೌದು.. ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಪ್ರತಿಷ್ಠಿತ ಆಲ್ ಇಂಡಿಯಾ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ಗೆ ಹುಬ್ಬಳ್ಳಿ-ಧಾರವಾಡ ದಲ್ಲಿ ಸ್ಥಳ ಗುರುತಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ದೇಶದಲ್ಲಿಯೇ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದು ಅವಳಿ ನಗರಕ್ಕೆ ಸ್ಥಳಾಂತರವಾಗುತ್ತದೆ ಎಂದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿತ್ತು. ಇಷ್ಟುದಿನ ಕಿಮ್ಸ್ ಸೇವೆಯನ್ನು ಪಡೆಯುತ್ತಿದ್ದ ಜನರು ಈಗ ಏಮ್ಸ್ ಸೇವೆಯಿಂದ ಮತ್ತಷ್ಟು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಸಂಭ್ರಮಿಸಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದೆ ಇದ್ದ ಹುಮ್ಮಸ್ಸು ಇದೀಗ ಇಲ್ಲವಾಗಿರೋದು ಸ್ಥಳೀಯರ ಅಸಮಾಧನಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ಧಾರವಾಡ ದಲ್ಲಿ ಏಮ್ಸ್ ಗೆ ಜಮೀನು ಗುರುತಿಸುವ ಕುರಿತಂತೆ ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಹೇಳಿಕೆಗಳು ಹೇಳಿಗಳಾಗಿಯೇ ಉಳಿಯುತ್ತಿವೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರನ್ನು ಕೇಳಿದ್ರೆ ಅವರು ಹೇಳುವುದು ಹೀಗೆ.
ಕೇಂದ್ರ ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿಯೇ ಸಚಿವರಾಗಿದ್ದ ರಾಜ್ಯ ಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಇಎಸ್ಐಸಿಯನ್ನು ಏಮ್ಸ್ ಆಗಿ ಮೇಲ್ದರ್ಜೆಗೆ ಏರಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಮಂಡಿಸಿದ್ದರು. ಆದರೆ ಈಗ ಏಮ್ಸ್ ಸ್ಥಾಪನೆಗೆ ರಾಜ್ಯ ಸರ್ಕಾರ ಹುಬ್ಬಳ್ಳಿ-ಧಾರವಾಡ ಮಹಾನಗರದ ಬಗ್ಗೆ ಒಲವು ತೋರಿಸಿದೆ. ಕಲಬುರಗಿಯಿಂದ ಅವಳಿ ನಗರಕ್ಕೆ ಏಮ್ಸ್ ತರುತ್ತೇವೆ ಅನ್ನುತ್ತಿರುವುದೇನೋ ಸರಿ. ಆದರೆ, ಏಮ್ಸ್ ಕಾರ್ಯಾರಂಭ ಮಾಡುವುದು ಯಾವಾಗ ಅನ್ನೋದು ಸಾರ್ವಜನಿಕರ ಪ್ರಶ್ನೆ.
Kshetra Samachara
06/11/2021 05:47 pm