ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹುಟ್ಟು ಹಬ್ಬದಂದೇ ನೇತ್ರದಾನಕ್ಕೆ ನಿರ್ಧಾರ ಮಾಡಿದ ಶಾಸಕ ಅಮೃತ ದೇಸಾಯಿ

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ನಾಳೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯವೇ ಮೆಚ್ಚುವ ರೀತಿಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಹೌದು! ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾದ ಬಳಿಕ ಅವರಂತೆ ಅನೇಕರು ನೇತ್ರದಾನ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಇದೀಗ ಶಾಸಕ ಅಮೃತ ದೇಸಾಯಿ ಕೂಡ ನಾಳೆ ತಮ್ಮ ಜನ್ಮ ದಿನದ ಸಂದರ್ಭದಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಸಹಿ ಮಾಡಲಿದ್ದಾರೆ.

ಪತಿಯ ಈ ಕಾರ್ಯಕ್ಕೆ ಪತ್ನಿ ಪ್ರಿಯಾ ಅವರೂ ಕೂಡ ಸಾಥ್ ನೀಡಿದ್ದು, ಅವರೂ ತಮ್ಮ ಕಣ್ಣುಗಳನ್ನು ದಾನ ನಿರ್ಧಾರ ಮಾಡಿದ್ದಾರೆ. ಜನ್ಮ ದಿನದ ಪ್ರಯುಕ್ತ ಇಬ್ಬರೂ ದಂಪತಿ ಈ ರೀತಿ ನೇತ್ರದಾನಕ್ಕೆ ನಿರ್ಧಾರ ಮಾಡಿ ಅಂಧರ ಬಾಳಿಗೆ ಬೆಳಕಾಗುವ ಕಾರ್ಯ ಮಾಡುತ್ತಿದ್ದು, ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

15/11/2021 09:17 pm

Cinque Terre

31.41 K

Cinque Terre

5

ಸಂಬಂಧಿತ ಸುದ್ದಿ