ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 10ರಂದು ಅವ್ವ ಸೇವಾ ಟ್ರಸ್ಟ್ ನಿಂದ ಸ್ತನ ಕ್ಯಾನ್ಸರ್ ಮುಂಜಾಗ್ರತೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಶಿಬಿರ

ಹುಬ್ಬಳ್ಳಿ: ಅವ್ವ ಸೇವಾ ಟ್ರಸ್ಟ್ ವತಿಯಿಂದ ಎಚ್.ಸಿ.ಜಿ ಎನ್.ಎಂ.ಆರ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದೊಂದಿಗೆ ಇದೇ ಅಕ್ಟೋಬರ್ 10ರಂದು ಶಿಕ್ಷಕಿಯರಿಗಾಗಿ ಸ್ತನ ಕ್ಯಾನ್ಸರ್ ಕುರಿತು ಮುಂಜಾಗ್ರತೆ, ಉಚಿತ ಥರ್ಮಲ್ ಪರೀಕ್ಷಾ ಶಿಬಿರವನ್ನು ಹುಬ್ಬಳ್ಳಿ ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಶಶಿ ಸಾಲಿ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದುಕೊಂಡು ಬಂದಿರುವ ಅವ್ವ ಸೇವಾ ಟ್ರಸ್ಟ್ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಈಗ ಮಹಿಳೆಯರಲ್ಲಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ನಿವಾರಣೆ ಬಗ್ಗೆ ಚಿಂತನೆ ನಡೆಸಿ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದೆ ಎಂದರು.

ಅಂದು ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಲಿದ್ದು, ಥರ್ಮಲ್ ಸ್ಕ್ರೀನಿಂಗ್ ಅತ್ಯಾಧುನಿಕ ವಿಧಾನವಾಗಿದ್ದು, ಯಾವುದೇ ರೀತಿಯ ನೋವು, ತೊಂದರೆ ಉಂಟಾಗುವುದಿಲ್ಲ ತಪಾಸಣೆಗೊಳಗಾಗಲು ಭಯಬೇಡ ಎಂದು ಅವರು ಮನವಿ ಮಾಡಿದರು.

Edited By : Shivu K
Kshetra Samachara

Kshetra Samachara

06/10/2021 12:54 pm

Cinque Terre

21.67 K

Cinque Terre

0

ಸಂಬಂಧಿತ ಸುದ್ದಿ