ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯಗೆ ಕೊರೊನಾ ದೃಢ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ 1 ವಾರಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೋವಿಡ್ ಸೋಂಕಿನಿಂದಾಗಿ 1 ವಾರ ಕ್ವಾರಂಟೈನಲ್ಲಿರುವುದರಿಂದ ಕ್ಷೇತ್ರದ ಜನತೆ ಯಾರೂ ಸಹ ನನ್ನ ಮನೆಯತ್ತ ಬರಬಾರದೆಂದು ಹಾಗೂ ತಮ್ಮ ಯಾವುದೇ ಕೆಲಸ, ಕಾರ್ಯಗಳಿಗೆ ಪಾಲಿಕೆ ಆವರಣದಲ್ಲಿರುವ ನನ್ನ ಕಚೇರಿಗೆ ಭೇಟಿ ನೀಡಿ ನನ್ನ ಆಪ್ತ ಸಹಾಯಕರಾದ ನಾಸಿರ್ ಅಸುಂಡಿ- 9739755699, ರಾಜು ಹಾದಿಮನಿ- 9945959599, ಶಿವಕುಮಾರ್- 9740576424 ಇವರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.

ಮತದಾರರ ಆಶೀರ್ವಾದ ನನ್ನ ಮೇಲೆ ಇರುವುದರಿಂದ‌ ಶೀಘ್ರ ಗುಣಮುಖನಾಗಿ ಮತ್ತೆ ಕ್ಷೇತ್ರದ ಹಾಗೂ ಜನರ ಸೇವೆಗೆ ಹಿಂದಿರುಗುತ್ತೇನೆ.

ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

12/01/2022 01:50 pm

Cinque Terre

62.78 K

Cinque Terre

12

ಸಂಬಂಧಿತ ಸುದ್ದಿ