ಧಾರವಾಡ: ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮ ಪಂಚಾಯತಿ ವಾರ್ಡ್ (ಕ್ಷೇತ್ರ)ಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಆಗಿರುವ ಸ್ಥಾನಗಳನ್ನು ತುಂಬಲು ಉಪ ಚುನಾವಣೆಗಳನ್ನು ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯತಿಯಲ್ಲಿ 2ನೇ ವಾರ್ಡ್ನಲ್ಲಿನ 1 (ಸಾಮಾನ್ಯ) ಸ್ಥಾನ, ಶಿವಳ್ಳಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ನಲ್ಲಿನ 1 (ಸಾಮಾನ್ಯ) ಸ್ಥಾನ, ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮ ಪಂಚಾಯತಿಯ ಗಂಗಿವಾಳ 1 (ಸಾಮಾನ್ಯ) ಸ್ಥಾನ, ಕಲಘಟಗಿ ತಾಲ್ಲೂಕಿನ ಧುಮ್ಮವಾಡ ಗ್ರಾಮ ಪಂಚಾಯತಿಯಲ್ಲಿ 2ನೇ ವಾರ್ಡ್‌ನಲ್ಲಿನ 1 (ಹಿಂದುಳಿದ ‘ಅ’ ವರ್ಗ) ಸ್ಥಾನ, ನವಲಗುಂದ ತಾಲ್ಲೂಕಿನ ಹಾಳಕುಸುಗಲ್ ಗ್ರಾಮ ಪಂಚಾಯತಿಯ ಹಾಳಕುಸುಗಲ್ 2ನೇ ವಾರ್ಡ್ನಲ್ಲಿನ 1 (ಸಾಮಾನ್ಯ) ಸ್ಥಾನ, ಮತ್ತು ಯಮನೂರ ಗ್ರಾಮ ಪಂಚಾಯತಿಯ ಅರೇಕುರಹಟ್ಟಿ ವಾರ್ಡ್ ನಂ.1 ರಲ್ಲಿ 1 ಸಾಮಾನ್ಯ ಮಹಿಳೆ ಸ್ಥಾನ ಮತ್ತು 1 ಸಾಮಾನ್ಯ ಸ್ಥಾನ, ಅರೇಕುರಹಟ್ಟಿ 2 ನೇ ವಾರ್ಡ್‌ನ 1 (ಅನುಸೂಚಿತ ಜಾತಿ ಮಹಿಳೆ) ಸ್ಥಾನ ಮತ್ತು 1 ಹಿಂದುಳಿದ ಅ ವರ್ಗ ಸ್ಥಾನ, ಅರೇಕುರಹಟ್ಟಿ 3 ನೇ ವಾರ್ಡ್‌ನ 1 ಹಿಂದುಳಿದ ‘ಬ’ ವರ್ಗ ಮಹಿಳೆ ಸ್ಥಾನ ಮತ್ತು 1 ಹಿಂದುಳಿದ ‘ಅ’ ವರ್ಗ ಸ್ಥಾನ ಮತ್ತು 1 ಸಾಮಾನ್ಯ ಮಹಿಳೆ ಸ್ಥಾನ ಹಾಗೂ 1 ಸಾಮಾನ್ಯ ಸ್ಥಾನ, ಕುಂದಗೋಳ ತಾಲ್ಲೂಕಿನ ಬರದ್ವಾಡ ಗ್ರಾಮ ಪಂಚಾಯತಿಯ ಬರದ್ವಾಡ 1 ನೇ ವಾಡ್‍ನ 1 ಅನುಸೂಚಿತ ಪಂಗಡ ಮಹಿಳೆ ಸ್ಥಾನ ಮತ್ತು 1 ಹಿಂದುಳಿದ ‘ಅ’ ಪ್ರವರ್ಗ ಸ್ಥಾನ ಮತ್ತು 1 ಸಾಮಾನ್ಯ ಸ್ಥಾನ ಹಾಗೂ ಬರದ್ವಾಡ 2ನೇ ವಾರ್ಡ್‌ನಲ್ಲಿ 1 ಸಾಮಾನ್ಯ ಮಹಿಳೆ ಸ್ಥಾನ ಮತ್ತು 1 ಹಿಂದುಳಿದ ‘ಬ’ ಪ್ರ-ವರ್ಗ ಮಹಿಳೆ ಸ್ಥಾನ, 1 ಸಾಮಾನ್ಯ ಸೇರಿದಂತೆ ಒಟ್ಟು 19 ಸ್ಥಾನಗಳನ್ನು ತುಂಬಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 1993 ರ 12ನೇ ನಿಯಮಕ್ಕನುಸಾರವಾಗಿ ಉಪ ಚುನಾವಣೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಜರುಗುವ ಉಪ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ. ಮತ್ತು ಅಕ್ಟೋಬರ್ 19 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಅಕ್ಟೋಬರ್ 21 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಮತದಾನವನ್ನು ಅಕ್ಟೋಬರ್ 28 ರಂದು ಬೆಳಿಗ್ಗೆ 07 ಗಂಟೆಯಿಂದ ಸಾಯಂಕಾಲ 05 ಗಂಟೆಯವರೆಗೆ ನಡೆಸಲಾಗುವುದು. ಅಕ್ಟೋಬರ್ 31 ರೊಳಗಾಗಿ ಚುನಾವಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Kshetra Samachara
13/10/2022 10:58 pm