ಧಾರವಾಡ: ಕಮಿಷನ್ ವಿಚಾರದಲ್ಲಿ ಪ್ರಿಯಾಂಕ ಖರ್ಗೆಗೆ ಜೊಲ್ಲು ಸುರಿಸುವುದು ಚೆನ್ನಾಗಿ ಗೊತ್ತಿದೆ. ಅದರಲ್ಲಿ ಅವರು ನಿಸ್ಸೀಮರ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಅವರಿಗೆ ವಾಸ್ತವಾಂಶದ ಅರಿವಿಲ್ಲ. ಅವರೆಲ್ಲ ಹೈಫೈ ಜೀವನದಲ್ಲಿ ಬೆಳೆದವರು. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ, ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.
ಈ ಹಿಂದೆ ಪ್ರಿಯಾಂಕ ಅವರು ಹೆಣ್ಣು ಮಗಳೊಬ್ಬಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದು ಗೊತ್ತೇ ಇದೆ. ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದರು.
ಇನ್ನು ಸಿಎಂ ಉದ್ರಿ ಭಾಷಣ ಮಾಡಿದ್ದಾರೆ ಎಂಬ ಪ್ರಿಯಾಂಕ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪಾಟೀಲ, ಬೊಮ್ಮಾಯಿ ದಡ್ಡರಿಲ್ಲ. ಅವರು ಅತ್ಯಂತ ಚಾಣಾಕ್ಷರಿದ್ದಾರೆ. ಭಾಷಣ ಮಾಡುವುದು ಅವರಿಗೆ ಗೊತ್ತಿದೆ. ಯಾವುದೇ ಕಾರ್ಯಕ್ರಮ ನಿಭಾಯಿಸುವ ಶಕ್ತಿ ಅವರಿಗಿದೆ. ಆಡಳಿತ ನಡೆಸುವುದೂ ಅವರಿಗೆ ಗೊತ್ತಿದೆ. ಇದನ್ನು ಪ್ರಿಯಾಂಕ ಖರ್ಗೆ ಅವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಇಂದು ಕೇರಳ ಸಿಎಂ ಬರುವವರಿದ್ದರಿಂದ ಮುಖ್ಯಮಂತ್ರಿಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಕೃಷಿ ಮೇಳಕ್ಕೆ ನನಗೇ ಹೋಗಿ ಬಾ ಎಂದಿದ್ದಕ್ಕೆ ನಾನೇ ಕೃಷಿ ಮೇಳಕ್ಕೆ ಚಾಲನೆ ನೀಡಿದ್ದೇನೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2022 06:19 pm