ಧಾರವಾಡ: ಇತ್ತೀಚೆಗೆ ಧಾರವಾಡದ ಡಿಎಚ್‌ಓ ಕಚೇರಿಯಲ್ಲಿ ನಡೆಸಲಾದ ಸುದರ್ಶನ ಹೋಮಕ್ಕೆ ಸಂಬಂಧಿಸಿದಂತೆ ಡಿಎಚ್‌ಓ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಕಾರಣಕ್ಕೆ ಡಿಎಚ್‌ಓ ಕರಿಗೌಡರ ಹಾಗೂ ಡಿಎಂಓ ಮಂಜುನಾಥ್ ಅವರು ಆತ್ಮಶಾಂತಿಗಾಗಿ ಕಚೇರಿಯಲ್ಲೇ ಸುದರ್ಶನ ಸುದರ್ಶನ ಹೋಮ ನಡೆಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಮೊದಲಿಗೆ ಡಿಎಚ್‌ಓ ಅವರ ಕೆಲಸವನ್ನು ಸಮರ್ಥಿಸಿಕೊಂಡರು. ಸರ್ಕಾರಿ ಕಚೇರಿಯಲ್ಲಿ ಒಳ್ಳೆಯದಾಗಲಿ ಅಂತಾ ಸುದರ್ಶನ ಹೋಮ ನಡೆಸಿರಬಹುದು. ಅದರ ಹಿಂದೆ ಒಳ್ಳೆಯ ಉದ್ದೇಶವಿದೆ. ಆದರೆ, ಸರ್ಕಾರಿ ಕಚೇರಿಯಲ್ಲಿ ಈ ರೀತಿ ಮಾಡಲು ಅವಕಾಶವಿಲ್ಲ. ಆದರೆ, ಇದಕ್ಕೆ ಹೆಚ್ಚು ಒತ್ತು ಕೊಡುವ ಅಗತ್ಯವಿಲ್ಲ. ದೇವರ ಮೇಲೆ ಹೆಚ್ಚು ನಂಬಿಕೆ ಇದ್ದವರು ಈ ರೀತಿ ಮಾಡುತ್ತಾರೆ. ಆದರೂ ಅವರಿಗೊಂದು ನೋಟಿಸ್ ಕೊಡಿ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/09/2022 12:50 pm