ಹುಬ್ಬಳ್ಳಿ: ಅವಳಿನಗರದ ಜನರಿಗೆ ತ್ವರಿತ ಸೇವೆಯ ಜೊತೆಗೆ ಗುಣಮಟ್ಟದ ಸೇವೆ ನೀಡಲು ಚಿಂತನೆ ನಡೆಸಿರುವ ಬಿ.ಆರ್.ಟಿ.ಎಸ್ ಯೋಜನೆ ಈಗ ಒಂದಿಲ್ಲೊಂದು ರೀತಿಯಲ್ಲಿ ಹೊಸ ನಿರ್ಧಾರಕ್ಕೆ ಮುಂದಾಗುತ್ತಿದೆ. ಮೊನ್ನೆಯಷ್ಟೇ ಕುಂದುಕೊರತೆಗಳ ಅಹವಾಲು ಸ್ವೀಕರಿಸುವ ಮೂಲಕ ಹೊಸ ನಿರ್ಧಾರ ತೆಗೆದುಕೊಂಡಿದ್ದ ಬಿ.ಆರ್.ಟಿ.ಎಸ್ ಈಗ ಮತ್ತೊಂದು ವಿನೂತನ ನಿರ್ಧಾರಕ್ಕೆ ಮುಂದಾಗಿದೆ.
ಹೌದು.. ಅವಳಿನಗರದಲ್ಲಿ ಬಿ.ಆರ್.ಟಿ.ಎಸ್ ಯೋಜನೆ ಪ್ರಯಾಣಿಕರಿಗೆ ಸೇವೆಯನ್ನು ಮತ್ತಷ್ಟು ವಿತರಿಸುವ ಹಾಗೂ ಪ್ರಯಾಣಿಕರಿಗೆ ಅನುಕೂಲಕರ ಸೇವೆಯನ್ನು ಒದಗಿಸಲು ಚಿಂತನೆ ನಡೆಸಿದ್ದು, ಈಗ ಮತ್ತಷ್ಟು ಬಸ್ ಸ್ಟಾಫ್ ಸ್ಥಾಪನೆ ಮಾಡುವತ್ತ ಚಿಂತನೆ ನಡೆಸಿದೆ. ಈಗಾಗಲೇ ತ್ವರಿತ ಸೇವೆಯ ಮೂಲಕ ಜನಮನ್ನಣೆ ಪಡೆದಿರುವ ಚಿಗರಿ ಈಗ ಸಾರ್ವಜನಿಕರಿಗಾಗಿ ಮತ್ತಷ್ಟು ಕಡೆಯಲ್ಲಿ ನಿಂತು ಪ್ರಯಾಣ ಮಾಡಲಿದೆ.
ಇನ್ನೂ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ಬಿ.ಆರ್.ಟಿ.ಎಸ್ ಟರ್ಮಿನಲ್ ಹತ್ತಿರ ಜನರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಈ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿಯ ಮೂಲಕ ಸಾರಿಗೆ ಸಂಸ್ಥೆ ಗಮನ ಸೆಳೆದಿದ್ದು, ಈಗ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣಗಳನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು, ಟ್ರಾಫಿಕ್ ಸಮಸ್ಯೆ ಸುಧಾರಿಸಿಕೊಂಡು ಚಿಗರಿ ಮುನ್ನಡೆಯಲಿದೆ.
ಒಟ್ಟಿನಲ್ಲಿ ವೇಗದಲ್ಲಿ ಓಡುವ ಚಿಗರಿಗೆ ಮತ್ತಷ್ಟು ನಿಲ್ದಾಣಗಳ ಅಡೆತಡೆಗಳನ್ನು ಹಾಕಿ ವೇಗವನ್ನು ಕುಗ್ಗಿಸುವ ಕಾರ್ಯವನ್ನು ಮಾಡದೇ ಮತ್ತಷ್ಟು ಅಧುನಿಕ ತಂತ್ರಜ್ಞಾನದ ನಿರ್ಧಾರದ ಮೂಲಕ ಸೇವೆಯನ್ನು ವಿಸ್ತರಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
03/09/2022 04:43 pm