ಧಾರವಾಡ: ಧಾರವಾಡ ಮದಾರಮಡ್ಡಿಯ ಮಕ್ಕಾ ಮಸೀದಿ ಹಾಗೂ ಮಕಾನ್ ಆಡಳಿತ ಮಂಡಳಿಗೆ ಮುಂದಿನ ಮೂರು ವರ್ಷಗಳ ಅವಧಿಗೆ 11 ಸದಸ್ಯರ ಆಯ್ಕೆಗೆ ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ.
ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ವಕ್ಫ್ ಅಧಿಕಾರಿ ಮೈಮುದ್ದೀನ ಸಜ್ಜು ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಆಗಸ್ಟ್ 9 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ. ಆಗಸ್ಟ್ 16 ಮಧ್ಯಾಹ್ನ 1.30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಆಗಸ್ಟ್ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 19 ರ ಮಧ್ಯಾಹ್ನ 1.30 ರವರೆಗೆ ನಾಮಪತ್ರ ಹಿಂಪಡೆಯಬಹುದು.
ಆಗಸ್ಟ್ 29 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮದಾರಮಡ್ಡಿಯ ಮಕ್ಕಾ ಮಸೀದಿ ಮತ್ತು ಮಕಾನ್‌ನಲ್ಲಿ ಮತದಾನ ನಡೆಯಲಿದೆ. ಅದೇ ದಿನ ಸಂಜೆ 4 ರ ನಂತರ ಮತಗಳ ಎಣಿಕೆ ಪ್ರಾರಂಭವಾಗಿ, ಫಲಿತಾಂಶ ಪ್ರಕಟವಾಗಲಿದೆ. ಸೆ.2 ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
Kshetra Samachara
10/08/2022 10:21 am