ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೇಯರ್ ಆದ್ರೂ ಸಮಯ ಕಳೆಯೋದು ಮಾತ್ರ ಹಿಂದಿ ಪ್ರಚಾರ ಸಭಾದಲ್ಲಿ!

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೂರು ವರ್ಷಗಳ ನಂತರ ಚುನಾಯಿತ ಜನಪ್ರತಿನಿಧಿಗಳು ಅಧಿಕಾರ ನಡೆಸುತ್ತಿದ್ದಾರೆ.ಈರೇಶ ಅಂಚಗೇರಿ ಮೇಯರ್ ಆಗಿಯೂ ಆಯ್ಕೆಯಾಗಿದ್ದಾರೆ. ಈಗಲಾದರೂ ನಗರಗಳು ಸುಧಾರಣೆ ಕಾಣಬಹುದು ಎಂದು ಜನ ಊಹಿಸಿದ್ದರು. ಆದರೆ, ಮೇಯರ್ ಈರೇಶ ಅಂಚಟಗೇರಿ ಅವರು ಪಾಲಿಕೆಗಿಂತ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೇಲೆಯೇ ಒಲವು ತೋರುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಅಲ್ಲದೇ ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲೇ ಹೆಚ್ಚಿನ ಅವಧಿ ಕಳೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈರೇಶ ಅಂಚಟಗೇರಿ ಅವರು ಮೇಯರ್ ಆದ ಮೇಲೆ ತಮ್ಮ ಕಚೇರಿಯಲ್ಲಿ ಕಾಲ‌ ಕಳೆದಿದ್ದು ಕಡಿಮೆ. ಹೀಗಂತ ನಾವು ಹೇಳ್ತಿಲ್ಲ. ಅವಳಿ‌ನಗರದ ಜನ ಹೇಳ್ತಿದ್ದಾರೆ. ಅಂಚಟಗೇರಿ ಮೇಯರ್ ಅಷ್ಟೇ ಅಲ್ಲ. ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರು ಕೂಡ ಆಗಿದ್ದಾರೆ. ‌ಹೀಗಾಗಿ ಅವರು ಪ್ರತಿ ದಿನ ಮಧ್ಯಾಹ್ನದವರೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಹಿಂದಿ ಪ್ರಚಾರ ಸಭಾ ಕಚೇರಿಯಲ್ಲೇ ಕಾಲ ಕಳೆಯುತ್ತಾರೆ. ಅಲ್ಲದೇ ಅಲ್ಲಿಯ ವ್ಯವಹಾರ ಕೂಡ ನೋಡಿಕೊಳ್ತಾರೆ. ಅಂಚಟಗೇರಿ ಮೇಯರ್ ಆಗುವ ಮೊದಲೇ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾಗಿದ್ದಾರೆ. ಆದರೆ ಮೇಯರ್ ಸ್ಥಾನದ ದೊಡ್ಡ ಜವಾಬ್ದಾರಿ ಬಂದ ಮೇಲೆಯೂ ಅವರು ಆ ಸ್ಥಾನದಲ್ಲೇ ಮುಂದುವರೆದಿದ್ದಾರೆ‌.‌ ಇವರಿಗೆ ಇಲ್ಲಿ ಮುಂದುವರೆಯಲು ಏನೂ ಅಭ್ಯಂತರವಿಲ್ಲ. ಆದರೆ, ಮೇಯರ್ ಆದ ಇವರು ಅವಳಿ ನಗರ ಯಾವಾಗ ಸಂಭಾಳಿಸುತ್ತಾರೋ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಮೂರು ವರ್ಷಗಳ ನಂತರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಕೈಗೆ ಅಧಿಕಾರ ಬಂದಿದೆ. ಸಿಕ್ಕ ಜವಾಬ್ದಾರಿಯನ್ನು ಇವರು ಸರಿಯಾಗಿ ನಿಭಾಯಿಸಬೇಕು. ಆದರೆ ಮೇಯರ್ ಹಾಗಲ್ಲ. ಬೇರೆ ಬೇರೆ ಕಡೆ ಅಧ್ಯಕ್ಷ ಹಾಗೂ ಸದಸ್ಯ ಕೂಡಾ‌ ಇದ್ದಾರೆ. ಇದನ್ನ ಮೇಯರ್ ಸಾಹೇಬ್ರಿಗೆ ಕೇಳಿದ್ರೆ, ನಾನು 15 ಗಂಟೆ ಕಾಲ ಪಾಲಿಕೆ ಕೆಲಸ ಮಾಡುತ್ತೇನೆ ಅಂತಾರೆ.

ಒಟ್ಟಿನಲ್ಲಿ ಈ‌ ಮೇಯರ್ ಅಂಚಟಗೇರಿ ಅವರು ತಾವು ಏನು ಬೇಕಾದ್ರೂ ಮಾಡಲಿ, ಆದರೆ ಜನರಿಗೆ ಮೋಸ ಆಗದಂತೆ‌‌ ಕೆಲಸ‌ ಮಾಡಿದರೆ ಸಾಕು.‌ ಯಾಕಂದ್ರೆ ಮೇಯರ್ ಸ್ಥಾನದ ಜೊತೆಯಲ್ಲಿ ಇನ್ನೊಂದು ಕಡೆ ಇವರು ಅಧ್ಯಕ್ಷ ಕುರ್ಚಿ‌ ಕೂಡಾ ನೋಡಿಕೊಳ್ಳಬೇಕಾಗಿದ್ದು, ಆ ಸ್ಥಾನದ ಬಗ್ಗೆಯೂ ಇವರು ಚಿಂತೆ ಮಾಡಬೇಕಲ್ವೆ?

Edited By : Somashekar
Kshetra Samachara

Kshetra Samachara

04/08/2022 06:02 pm

Cinque Terre

68.22 K

Cinque Terre

2

ಸಂಬಂಧಿತ ಸುದ್ದಿ