ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ: ಹುಡುಕಿಕೊಡಿ ಎಂದ ಧಾರವಾಡ ಜಿಲ್ಲೆಯ ಜನತೆ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ ಎಂಬುವಂತ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲೆಯಾದ್ಯಂತ ಸಾಕಷ್ಟು ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಕೂಡ ಇದುವರೆಗೂ ಜಿಲ್ಲೆಗೆ ಭೇಟಿ ನೀಡದೇ ಇರುವುದರಿಂದ ಜನರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ಎನ್ನುತ್ತಿದ್ದಾರೆ.

ಹೌದು.. ಮುಖ್ಯಮಂತ್ರಿ ಆದೇಶಿಸಿದರೂ ಜಿಲ್ಲೆಗೆ ಸಚಿವರ ಭೇಟಿ ಇಲ್ಲ. ರಾಜ್ಯಾದ್ಯಂತ ಮಳೆಯ ಆರ್ಭಟ ಹೆಚ್ಚಾಗಿದೆ. ಬಹುತೇಕ ಕಡೆಗಳಲ್ಲಿ ಜನಜೀವನ ಅಸ್ತವ್ಯವಸ್ಥವಾಗಿದೆ‌. ಅದೇ ರೀತಿ ಧಾರವಾಡ ಜಿಲ್ಲೆಯ ಕೆಲ ತಾಲೂಕಿನಲ್ಲಿಯೂ ಜನರು ಪರದಾಡುತ್ತಿದ್ದಾರೆ. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಈ ವರೆಗೆ ಜಿಲ್ಲೆಗೆ ಭೇಟಿ ನೀಡದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ ಸಚಿವರ ಭೇಟಿ ಎನ್ನುತ್ತಿದ್ದಾರೆ ಜನ. ಕಳೆದ ಮೂರು ದಿನಗಳ ಹಿಂದಷ್ಟೇ ಸ್ವತಃ ಮುಖ್ಯಮಂತ್ರಿಗಳೇ ಎಲ್ಲ ಸಚಿವರಿಗೆ ಅವರವರ ಜಿಲ್ಲೆಗೆ ಹೋಗುವಂತೆ ಆದೇಶ ಮಾಡಿದ್ದಾರೆ. ಆದ್ರೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಜಿಲ್ಲೆಗೆ ಭೇಟಿ ನೀಡಿಲ್ಲ.‌ ಮಳೆಯ ಬಗೆಗಿನ ಮಾಹಿತಿಯನ್ನೂ ಪರಿಶೀಲಿಸಿಲ್ಲ.‌ ಜೊತೆಗೆ ಜಿಲ್ಲೆಯ ಜನರಿಗೆ ಅಭಯವನ್ನೂ ನೀಡಿಲ್ಲ ಎನ್ನುವುದು ಮಾತ್ರ ನೋವಿನ ಸಂಗತಿ.

ಧಾರವಾಡ ಜಿಲ್ಲೆಯಲ್ಲಿ ನಿರಂತರ ‌ಮಳೆಯಿಂದ 157 ಮನೆಗಳು ಕುಸಿತವಾಗಿದೆ. ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 157 ಮನೆಗಳು ಭಾಗಶಃ ಬಿದ್ದಿವೆ‌. ಆದರೆ ಈಗ ಸುರಿಯುತ್ತಿರುವ ಮಳೆ ಇನ್ನೂ ನಾಲ್ಕು ದಿನಗಳ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ‌. ಅಪಾಯದ ಅಂಚಿನಲ್ಲಿರುವ ಪ್ರದೇಶಗಳಿಗೆ ಸಚಿವರು ಭೇಟಿ ನೀಡುತ್ತಾರೋ..? ಇಲ್ಲವೋ ಎಂಬ ಹಲವು ಆಶಯದೊಂದಿಗೆ ಜನರು ಜಾತಕ ಪಕ್ಷಿಯಂತೆ ಕಾಯುತ್ತಲೇ ಕುಳಿತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/07/2022 02:26 pm

Cinque Terre

27.46 K

Cinque Terre

4

ಸಂಬಂಧಿತ ಸುದ್ದಿ