ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಂಚಟಗೇರಿಗೆ ಆ.14ರವರೆಗೆ ಗಡುವು ನೀಡಿದ ಚಿಂಚೋರೆ

ಧಾರವಾಡ: ಇತ್ತೀಚೆಗೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯಾಗಬೇಕು ಎಂಬ ಹೋರಾಟ ನಡೆದಿತ್ತು. ಧಾರವಾಡ ಜನರನ್ನು ಸಮಾಧಾನಪಡಿಸುವುದಕ್ಕಾಗಿ ಧಾರವಾಡದವರನ್ನೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಗಿ ನೇಮಕ ಮಾಡಲಾಗಿದೆ. ಮೇಯರ್ ಈರೇಶ ಅಂಚಟಗೇರಿ ಅವರು ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಬೆಂಬಲ ಸೂಚಿದಿದ್ದರು. ಅದರ ಆಧಾರದ ಮೇಲೆಯೇ ಇದೀಗ ಅವರು ಮೇಯರ್ ಆಗಿದ್ದು, ಅವರು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯಾಗುವ ಸಂಬಂಧ ಠರಾವು ಪಾಸ್ ಮಾಡಬೇಕು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈರೇಶ ಅವರು ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ ಸಹಿ ಹಾಕಿದ್ದಾರೆ. ಮೊದಲ ಸಾಮಾನ್ಯ ಸಭೆಯನ್ನು ಅವರು ಧಾರವಾಡದಲ್ಲೇ ಕರೆಯಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಕರೆದಿದ್ದಾರೆ. ಪ್ರತ್ಯೇಕ ಮಹಾನಗರ ಪಾಲಿಕೆಯಾಗುವುದಕ್ಕೆ ಧಾರವಾಡದ ಎಲ್ಲ ಪಾಲಿಕೆ ಸದಸ್ಯರು ಬೆಂಬಲ ಸೂಚಿಸುತ್ತಾರೆ. ನಮ್ಮ ಬೇಡಿಕೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯಾಗಬೇಕು ಎನ್ನುವುದು ಎಂದರು.

ಈರೇಶ ಅಂಚಟಗೇರಿ ಅವರಿಗೆ ಆ.14ರ ವರೆಗೂ ಗಡುವು ನೀಡುತ್ತೇವೆ. ಒಂದು ವೇಳೆ ಈ ಬೇಡಿಕೆ ಬಗ್ಗೆ ಠರಾವು ಮಾಡದೇ ಹೋದಲ್ಲಿ ಸ್ವಾತಂತ್ರ್ಯ ದಿನಕ್ಕಿಂತ ಮುಂಚೆಯೇ ಅಂದರೆ ಆ.14 ರಿಂದ ಮತ್ತೆ ಹೋರಾಟ ಆರಂಭಿಸಲಿದ್ದೇವೆ ಎಂದರು.

ಪ್ರತ್ಯೇಕ ಮಹಾನಗರ ಪಾಲಿಕೆಯ ಸಹಿ ಸಂಗ್ರಹ ಹೋರಾಟಕ್ಕೆ ಶಾಸಕ ಅರವಿಂದ ಬೆಲ್ಲದ ಸಹಿ ಹಾಕಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ, ಧಾರವಾಡದ ಪ್ರಜ್ಞಾವಂತ ಜನ ಎಲ್ಲರೂ ಸಹಿ ಹಾಕಿದ್ದಾರೆ ಎಂದರು.

ಪಾಲಿಕೆಗೆ 50 ಕೋಟಿ ಪಿಂಚಣಿ ಹಣ ಬರಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಬಿಜೆಪಿ ಸದಸ್ಯರು ಪಿಂಚಣ ಹಣಕ್ಕಾಗಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಕೆಲಸ ಮಾಡಿದರು. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಪಾಲಿಕೆಗೆ ಪಿಂಚಣಿ ಹಣ ಬಿಡುಗಡೆಯಾಗಿದೆ. ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷ ಕಳೆದರೂ ಇನ್ನೂ ಪಿಂಚಣಿ ಹಣ ಬಿಡುಗಡೆಯಾಗಿಲ್ಲ. ಇದು ಬಿಜೆಪಿ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದರು.

Edited By :
Kshetra Samachara

Kshetra Samachara

25/06/2022 01:34 pm

Cinque Terre

18.66 K

Cinque Terre

2

ಸಂಬಂಧಿತ ಸುದ್ದಿ