ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಹಾನಗರ ಪಾಲಿಕೆ ಆವರಣಕ್ಕೆ ಆಗಮಿಸಿದ್ದಾರೆ.
ಮೇಯರ್ ಸ್ಥಾನಕ್ಕೆ ಈರೇಶ್ ಅಂಚಟಗೇರಿ, ಉಪಮೇಯರ್ ಸ್ಥಾನಕ್ಕೆ ಉಮಾ ಮುಕುಂದ ನಾಮಪತ್ರ ಸಲ್ಲಿಕೆ ಮಾಡಲು ಆಗಮಿಸಿದ ಬೆನ್ನಲ್ಲೇ ಮಾಧ್ಯಮದ ಕಡೆಗೆ ವಿಕ್ಟರಿ ತೋರಿಸುವ ಮೂಲಕ ಸಂತೋಷ ಹೊರಹಾಕಿದ್ದಾರೆ. ಇನ್ನೂ ಶಾಸಕ ಅಮೃತ ದೇಸಾಯಿ, ಬಿಜೆಪಿ ಪ್ರಮುಖರ ಜೊತೆ ಆಗಮಿಸಿದ ಅಭ್ಯರ್ಥಿಗಳು ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
Kshetra Samachara
28/05/2022 12:36 pm