ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪತ್ರ ವ್ಯವಹಾರ ಮುಗಿದಿದ್ದರೂ ಟೈಮ್ ಫಿಕ್ಸ್ ಆಗ್ತಿಲ್ಲ; ವರ್ಷ ಸಮೀಪಿಸಿದರೂ ಹರ್ಷವಿಲ್ಲ.!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು ವರ್ಷ ಸಮೀಪಿಸುತ್ತಾ ಬಂದರೂ ಚುನಾಯಿತ ಸದಸ್ಯರಿಗೆ ಮಾತ್ರ ಅಧಿಕಾರ ಸಿಕ್ಕಿಲ್ಲ.

ಈಗಾಗಲೇ ಮಹಾನಗರ ಪಾಲಿಕೆಯಿಂದ ಮೇಯರ್ ಉಪಮೇಯರ್ ಚುನಾವಣೆಗೆ ಪತ್ರ ವ್ಯವಹಾರ ಮುಗಿದಿದ್ದರೂ ಕೂಡ ಆಯ್ಕೆ ಪ್ರಕ್ರಿಯೆ ಇನ್ನುಇತ್ಯರ್ಥವಾಗಿಲ್ಲ.

ವಾರ್ಡ್ ಪುನರ್ವಿಂಗಡಣೆ ಬಳಿಕ 82 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದಿದೆ. ಇನ್ನೇನು ಮೇಯರ್ ಉಪಮೇಯರ್ ಆಯ್ಕೆಗೆ ಅಧಿಸೂಚನೆ ಹೊರಬೀಳಲಿದೆ ಎಂದು ಅಧಿಕಾರದ ಕನಸುಕಂಡಿದ್ದ ಕಾರ್ಪೊರೇಟರ್ಗಳ ನಿರೀಕ್ಷೆ ಇನ್ನೂವರೆಗೂ ಹಾಗೆ ಮುಂದುವರಿದಿದೆ.

ಮೊದಲು 21 ಅವಧಿಯದ್ದೋ ಅಥವಾ 23ನೇ ಅವಧಿಯದ್ದೋ ಎಂಬ ಜಿಜ್ಞಾಸೆಯಲ್ಲಿಯೇ ಪಾಲಿಕೆ ನಾಲ್ಕು ತಿಂಗಳು ಕಾರ್ಯ ನಿರ್ವಹಿಸಿದೆ. ಈ ಬಗ್ಗೆ ಅಧಿಕೃತವಾಗಿ ಪಾಲಿಕೆ ಕೇಳಿಕೊಂಡ ನಾಲ್ಕು ತಿಂಗಳ ನಂತರ ನಗರಾಭಿವೃದ್ಧಿ ಇಲಾಖೆಯು 21ನೇ ಅವಧಿಯಂತೆಯೇ ಮೇಯರ್, ಉಪಮೇಯರ್ ಆಯ್ಕೆ ಮಾಡುವಂತೆ ಸೂಚಿಸಿ ಅಧಿಕೃತ ಪತ್ರವನ್ನು ಕಳುಹಿಸಿದೆ. ಆದರೂ ಕೂಡ ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.

ಎಲ್ಲಾ ವಿಧದಲ್ಲಿ ಕ್ಲಿಯರ್ ಇದ್ದರೂ ಮೇಯರ್, ಉಪಮೇಯರ್ ಆಯ್ಕೆಗೆ ಮೀನಮೇಷ ಯಾಕೆ ಎಂಬ ಪ್ರಶ್ನೆ ಕಾರ್ಪೊರೇಟರ್ ಗಳನ್ನು ಕಾಡುತ್ತಿದೆ. ತಮ್ಮದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ವಿಳಂಬ ಮಾಡುತ್ತಿರುವುದೇಕೆ ಎಂಬುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

Edited By : Manjunath H D
Kshetra Samachara

Kshetra Samachara

09/05/2022 11:08 pm

Cinque Terre

52.58 K

Cinque Terre

4

ಸಂಬಂಧಿತ ಸುದ್ದಿ