ಕಲಘಟಗಿ: ಕ್ಷೇತ್ರದ ರಾಜಕಿಯದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಇಬ್ಬರು ನಾಯಕರಲ್ಲಿ ಬಹಳ ಪೈಪೋಟಿ ನಡೆದಿದೆ.
ಈಗಾಗಲೆ ಕಲಘಟಗಿ ಕ್ಷೇತ್ರದಲ್ಲಿ ಸಂತೋಷ ಲಾಡ್ ಹಾಗೂ ನಾಗರಾಜ್ ಛಬ್ಬಿ ಇವರ ಮಧ್ಯ ಟಿಕೆಟ್ ಗಾಗಿ ಪೈಪೋಟಿ ನಡೆದಿದ್ದು ಇತ್ತೀಚಿಗೆ ಸಂತೋಷ ಲಾಡ್ ಗ್ರಾಮೀಣ ಭಾಗದಲ್ಲಿ ಜಾತ್ರೆ ಹಾಗೂ ಕಾರ್ಯಕ್ರಮಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸುವ ಮೂಲಕ ಜನರ ಗಮನ ಸೆಳೆಯುತ್ತಿರೋದು ವಿಶೇಷವಾಗಿದೆ.
ಆದರೆ ಸಂತೋಷ ಲಾಡ್ ರವರು ತಿಂಗಳಿಗೆ ಒಮ್ಮೆ ವರ್ಷಕ್ಕೊಮ್ಮೆ ಬಂದು ಈ ರೀತಿಯಾದ ಪ್ರಚಾರ ತೆಗೆದುಕೊಳ್ಳುವುದು ಹೊಸದೆನು ಅಲ್ಲ. ಕಲಘಟಗಿ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ನಡೆದು ಕೊಂಡು ಬಂದಿರೋದನ್ನ ಜನರು ನೋಡಿದ್ದಾರೆ.
ಇದಕ್ಕೆ ಮೊನ್ನೆ ತಾನೆ ನಾಗರಾಜ ಛಬ್ಬಿ ಯವರು ಪತ್ರಿಕಾ ಗೋಷ್ಠಿಯಲ್ಲಿ, ನಾನು ಬೇರೆಯವರ ರೀತಿಯಲ್ಲಿ ನೂರು ಇನ್ನೂರು ದುಡ್ಡು ಹಂಚಿ ಬಂದಿಲ್ಲ. ನನಗೆ ಅವರ ರೀತಿ ಮನೆ ಹಾಗೂ ಜಾತ್ರೆಗಳಿಗೆ ಹೋಗಿ ಶೋ ಮಾಡೋಕೆ ಬರಲ್ಲ. ನಾನು ಕ್ಷೇತ್ರದಲ್ಲಿ ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಟಿಕೆಟ್ ನನಗೆ ದೊರೆಯುವ ವಿಶ್ವಾಸ ಇದೆ.
ಕಾಂಗ್ರೆಸ್ ಮುಖಂಡರು ಭರವಸೆ ಕೊಟ್ಟಿದ್ದಾರೆ ಎಂದು ಸಂತೋಷ ಲಾಡ್ ರವರಿಗೆ ಪರೋಕ್ಷವಾಗಿ ತಿರುಗೆಟು ನೀಡಿದ್ದಾರೆ.
Kshetra Samachara
06/05/2022 05:11 pm