ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮೇ 6 (ಶುಕ್ರವಾರ) ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುಣಾವಣೆ

ನವಲಗುಂದ: ನವಲಗುಂದ ಪುರಸಭೆ ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಲ್ಲದೆ ಅಭಿವೃದ್ಧಿ ಕೆಲಸಗಳು ಕುಂಟಿತವಾಗಿವೆ ಎನ್ನುವ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಈಗ ಜಿಲ್ಲಾಡಳಿತ ಮೇ 6 ಶುಕ್ರವಾರದಂದು ಚುಣಾವಣೆ ಘೋಷಣೆ ಮಾಡಿದೆ.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಾಮಪತ್ರ ಸ್ವೀಕೃತಿ ಹಾಗೂ ಮದ್ಯಾಹ್ನ 12:30ಕ್ಕೆ ನವಲಗುಂದ ಪುರಸಭೆ ಸಭಾಂಗಣದಲ್ಲಿ ಸಭೆಯೊಂದಿಗೆ ಚುನಾವಣೆ ಪ್ರಕ್ರಿಯೆಯನ್ನು ನಡೆಸಲಾಗುವುದು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡೂ ಸ್ಥಾನಗಳು ಸಾಮಾನ್ಯ ವರ್ಗದವರಿಗೆ ಮೀಸಲಿರುವುದರಿಂದ ಯಾರಿಗೆ ಗಿಟ್ಟಲಿದೆ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎಂಬುದು ಕುತೂಹಲ ಕೆರಳಿಸಿದೆ.

ಈ ಮೊದಲು ಕಾಂಗ್ರೆಸ್ 7 ಸದಸ್ಯರು, ಬಿಜೆಪಿಯ 6 ಸದಸ್ಯರು ಸೇರಿ ಒಪ್ಪಂದ ಮಾಡಿಕೊಂಡು ಅಧಿಕಾರ ವಹಿಸಿಕೊಂಡಿದ್ದರು. ಮಾಜಿ ಶಾಸಕ ಎನ್. ಹೆಚ್ ಕೋನರಡ್ಡಿ ಅವರು ಕಾಂಗ್ರೆಸ್ ಸೇರಿದ್ದರಿಂದ ಜೆಡಿಎಸ 10 ಸದಸ್ಯರು ಕಾಂಗ್ರೆಸ್ ಸೇರಿ ಒಟ್ಟು 17 ಬಹುಮತ ಹೊಂದಿದ್ದಾರೆ. ಇದೇ ತಿಂಗಳ 6ರಂದು ನಡೆಯಲಿರುವ ಚುನಾವಣೆಯಲ್ಲಿ ಯಾರಿಗೆ ಒಲಿಯಲಿದೆ ಸ್ಥಾನ ಎಂಬುದನ್ನು ಕಾಯ್ದು ನೋಡಬೇಕಿದೆ.

Edited By : PublicNext Desk
Kshetra Samachara

Kshetra Samachara

04/05/2022 06:27 pm

Cinque Terre

12.17 K

Cinque Terre

0

ಸಂಬಂಧಿತ ಸುದ್ದಿ