ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಒಬ್ಬ ಶಾಸಕ ತಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ಸಮರ್ಪಕವಾಗಿ ಹಾಗೂ ಸರಿಸಮನಾಗಿ ಅನುದಾನ ಒದಗಿಸಬೇಕು. ಆದರೆ
ಆ ಶಾಸಕರ ಮೇಲೆ ಇದೀಗ ಅನುದಾನ ತಾರತಮ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಅದೆಲ್ಲದರ ಬಗ್ಗೆ ಡೀಟೇಲ್ಸ್ ಇಲ್ಲಿದೆ
ಹೀಗೆ ಕೈಯಲ್ಲಿ ದಾಖಲೆಗಳನ್ನು ಹಿಡಿದು ತಮ್ಮ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಇವರೆಲ್ಲ ಎಐಎಮ್‌ಐಎಮ್ ಪಕ್ಷದ ಕಾರ್ಯಕರ್ತರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೂ ಮುನ್ನ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು, ತಮ್ಮ ಕ್ಷೇತ್ರ ವ್ಯಾಪ್ತಿಯ 71, 76 ಹಾಗೂ 77ನೇ ವಾರ್ಡ್ಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಸುಮಾರು 2 ಕೋಟಿಗೂ ಅಧಿಕ ಅನುದಾನವನ್ನು ಪಾಲಿಕೆ ಚುನಾವಣೆ ನಂತರ ಬೇರೆ ವಾರ್ಡ್ಗಳಿಗೆ ವರ್ಗಾವಣೆ ಮಾಡುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಮೂರು ವಾರ್ಡ್‌ಗಳಲ್ಲಿ ಎಐಎಮ್ಐಎಮ್ ಪಕ್ಷದ ವಿರುದ್ಧ ಕಾಂಗ್ರೆಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸೋತ ಹಿನ್ನೆಲೆಯಲ್ಲಿ, ಆ ವಾರ್ಡ್‌ಗಳಿಗೆ ಮೀಸಲಿಟ್ಟದ್ದ ಅನುದಾನವನ್ನು ಚುನಾವಣೆ ನಂತರ ಪ್ರಸಾದ ಅಬ್ಬಯ್ಯ ಅವರು ತಮ್ಮ ಪಕ್ಷದ ಪ್ರತಿನಿಧಿಗಳಿರುವ ವಾರ್ಡ್‌ಗಳಿಗೆ ವರ್ಗಾವಣೆ ಮಾಡಿದ್ದರೆ. ಮೂಲಕ, ಅನುದಾನದ ವಿಚಾರದಲ್ಲೂ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆಂದು ಎಐಎಮ್‌ಐಎಮ್ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ.. ಒಬ್ಬ ಶಾಸಕನಾಗಿ ತಮ್ಮ ಕ್ಷೇತ್ರದ ಅನುದಾನ ವಿಚಾರದಲ್ಲಿ ಪಕ್ಷಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುವುದನ್ನು ಬಿಟ್ಟು, ಶಾಸಕರು ತಮ್ಮ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಾರದರ್ಶಕವಾಗಿ ಸಹಕಾರ ನೀಡಬೇಕು ಅನ್ನೋದು ಎಐಎಮ್‌ಐಎಂ ಪಕ್ಷದ ಕಾರ್ಯಕರ್ತರ ಒತ್ತಾಯವಾಗಿದೆ.
Kshetra Samachara
03/03/2022 03:37 pm