ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಪ್ರೀಂ ಕೋರ್ಟ್‌ ಆದೇಶ ಬರುವತನಕ ನಾವು ಕಾಯಬೇಕು: ಕಾರಜೋಳ

ಧಾರವಾಡ: ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೂ ನಾವು ಕಾಯಬೇಕಿದೆ ಎಂದರು.

ಹನಿ ನೀರಾವರಿ ಯೋಜನೆಗೆ ರೈತರು ಹೆಚ್ಚು ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮಧ್ಯಪ್ರದೇಶದ ಮಾದರಿಯಲ್ಲಿ ಹನಿ ನೀರಾವರಿ ಬದಲಾಗಿ ರೈತರ ಹೊಲಗಳಿಗೆ ಪೈಪಲೈನ್ ಮೂಲಕ ನೀರು ಸರಬರಾಜು ಮಾಡುವ ಯೋಜನೆಯ ಬಗ್ಗೆ ಚಿಂತನೆ ನಡೆಸಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆಗೆ ಚರ್ಚಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಮಲಪ್ರಭಾ ಯೋಜನಾ ವಲಯದಡಿಯಲ್ಲಿ ಪ್ರಮುಖವಾಗಿ ಮಲಪ್ರಭಾ ನದಿಯ ಉಪನದಿಗಳಾದ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಲಪ್ರಭಾ ಜಲಾಶಯಕ್ಕೆ 27.00 ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ಈ ಆಣೆಕಟ್ಟು ನಿರ್ಮಾಣದಿಂದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಅಡಿ ಬರುವ 1,96,132 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಈ ಜಲಾಶಯಕ್ಕೆ ಮೂರು ಮುಖ್ಯ ಕಾಲುವೆಗಳಾದ ಬಲದಂಡೆ ಕಾಲುವೆ, ಎಡದಂಡೆ ಕಾಲುವೆ ಹಾಗೂ ನರಗುಂದ ಶಾಖಾ ಕಾಲುವೆಗಳು ಇರುತ್ತವೆ. ಜೊತೆಗೆ ಮಲಪ್ರಭಾ ಜಲಾಶಯದ ಅಂಚಿನ ಗುಂಟ ಹತ್ತು ಏತ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದು, ಒಟ್ಟಾರೆಯಾಗಿ 1,96,132 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಇದರಲ್ಲಿ ಸುಮಾರು 36,753 ಹೆಕ್ಟೇರ್ ಪ್ರದೇಶದಷ್ಟು ನೀರಾವರಿ ವಂಚಿತ ಕ್ಷೇತ್ರ ಇದೆ. ಈ ಯೋಜನೆಗೆ 1,383,48 ಕೋಟಿ ಅನುಮೋದನೆಗೊಂಡಿದ್ದು, ಇಲ್ಲಿಯವರೆಗೆ 2708.23 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಮಲಪ್ರಭಾ ಉಪನದಿಯಾದ ಹರಿನಾಲಾ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ನಿರ್ಮಿಸಿದ್ದು, ಬೈಲಹೊಂಗಲ ತಾಲೂಕಿನ 3,480 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಮಲಪ್ರಭಾ ಯೋಜನಾ ವಲಯದಲ್ಲಿ ಒಟ್ಟು 36 ಏತ ನೀರಾವರಿ ಯೋಜನೆಗಳು ಇದ್ದು, ಅವುಗಳಲ್ಲಿ 26 ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದು, 25 ಯೋಜನೆಗಳು ಚಾಲ್ತಿಯಲ್ಲಿವೆ ಎಂದರು.

ಕಲಘಟಗಿ ತಾಲೂಕಿನಲ್ಲಿ 35 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಗೆ 125 ಕೋಟಿಗೆ ಆಡಳಿತ್ಮಾಕ ಅನುಮೋದನೆ ದೊರಕಿದೆ. 2018 ರಿಂದಲೇ ಆರಂಭವಾಗಿರುವ ಈ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

Edited By : Manjunath H D
Kshetra Samachara

Kshetra Samachara

13/02/2022 11:31 am

Cinque Terre

25.9 K

Cinque Terre

1

ಸಂಬಂಧಿತ ಸುದ್ದಿ