ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈ ಬಾರಿಗೆ ಅಧಿಕಾರಶಾಹಿ ಬಜೆಟ್: ಬೆಟ್ಟದಷ್ಟು ನಿರೀಕ್ಷೆ ಹೊತ್ತ ಹುಬ್ಬಳ್ಳಿ ಧಾರವಾಡ ಅವಳಿನಗರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಕಾರ್ಪೊರೇಟರ್‌ಗಳ ಅದೃಷ್ಟವೋ..ದುರಾದೃಷ್ಟವೋ ಗೊತ್ತಿಲ್ಲ. ಕಾರ್ಪೊರೇಟರ್‌ಗಳಿದ್ದರೂ ಅಧಿಕಾರಿಗಳೇ ಮತ್ತೆ ಪಾಲಿಕೆಯಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಆರಿಸಿ ಬಂದರೂ ಅಧಿಕಾರ ಇಲ್ಲವಾಗಿದ್ದು, ಸಾರ್ವಜನಿಕ ನಿರೀಕ್ಷೆ ಈಗ ಹುಸಿಯಾಗಿದೆ.

ಕಳೆದ ಐದು ತಿಂಗಳ ಹಿಂದೆಯೇ ಚುನಾವಣೆಯಲ್ಲಿ ಕಾರ್ಪೊರೇಟರ್‌ಗಳ ಆಯ್ಕೆ ಮಾಡಲಾಗಿತ್ತು. 2022- 23 ಸಾಲಿನ ಪಾಲಿಕೆಯ ಬಜೆಟ್ ಪಾಲಿಕೆ ನೂತನ ಸದಸ್ಯರ ನೇತೃತ್ವದಲ್ಲಿ ಮಂಡನೆಯಾಗಲಿದೆ ಎಂದು ಅವಳಿ ನಗರದ ನಾಗರಿಕರು ಅಂದುಕೊಂಡಿದ್ದರು. ಆದರೆ, ಇದೆಲ್ಲವನ್ನೂ ರಾಜ್ಯ ಸರಕಾರ ಹುಸಿಗೊಳಿಸಿದೆ. ಪಾಲಿಕೆಯಲ್ಲಿ ಬಜೆಟ್ ಕರಡು ಪ್ರತಿ ಸಿದ್ಧಗೊಂಡು ಕಮಿಷನರ್ ಕಚೇರಿಗೆ ಬಂದಿದೆ. ಆಯುಕ್ತರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪ್ರತಿಯನ್ನು ಅಂತಿಮಗೊಳಿಸಿ ಅನುಮೋದನೆಗೆ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರ ಮೂಲಕ ಸರಕಾರಕ್ಕೆ ಕಳಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.

ಬಜೆಟ್‌ಗೆ ಪೂರ್ವಭಾವಿಯಾಗಿ ಔಪಚಾರಿಕ ಸಾರ್ವಜನಿಕರ ಸಭೆ ಕರೆದು ಅವರಿಂದ ಸಲಹೆ ಸೂಚನೆ, ಸಂಗ್ರಹಿಸಲಾಗುತ್ತಿತ್ತು. ಪಾಲಿಕೆಯಲ್ಲಿ ಬೆಳಗಾವಿ ಈಗಾಗಲೇ ಸಾರ್ವಜನಿಕರಿಂದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಜನವರಿ ತಿಂಗಳು ಮುಗಿದರೂ ಹು-ಧಾ ಪಾಲಿಕೆಯಿಂದ ಬಜೆಟ್ ನ ಸಾಂಪ್ರದಾಯಿಕ ಶಿಷ್ಟಾಚಾರ ಕೂಡ ನಡೆಯಲಿಲ್ಲ. ಅಲ್ಲದೇ ಪಾಲಿಕೆಯ ತೆರಿಗೆ ಹಾಗೂ ವಿವಿಧ ಸಂಪನ್ಮೂಲಗಳ ಮೂಲಕ 219 ಕೋಟಿ ರೂ. ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿತ್ತು. ವಿವಿಧ ಯೋಜನೆಗಳಡಿ ರಾಜ್ಯ ಸರಕಾರದಿಂದ 450 ಕೋಟಿ ರೂ. ಬರಲಿದೆ ಎಂದು ನಿರೀಕ್ಷೆ ಮಾಡಿತ್ತು. ಪಾಲಿಕೆಯ ಸೈಟ್ ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಗ್ರಹಿಸಿದ್ದು ಸಾರ್ವಜನಿಕರಿಗೆ ಮಾತ್ರ ತಿಳಿದಿದೆ. ಕಳೆದ ಸಾಲಿನ ಖರ್ಚು ವೆಚ್ಚದ ಬಗ್ಗೆ ಬಜೆಟ್‌ಗೆ ಅನುಮೋದನೆ ದೊರೆತ ಬಳಿಕವೇ ತಿಳಿಯಲಿದೆ.

ಒಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರವಿಲ್ಲದೇ ಅಧಿಕಾರಗಳ ನೇತೃತ್ವದಲ್ಲಿ ನಡೆಯುವ ಬಜೆಟ್ ಎಷ್ಟರ ಮಟ್ಟಿಗೆ ಜನರಿಗೆ ವರವಾಗಲಿದೆ ಎಂದು ಕಾದುನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

31/01/2022 05:15 pm

Cinque Terre

26.3 K

Cinque Terre

0

ಸಂಬಂಧಿತ ಸುದ್ದಿ