ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪರಿಷತ್ ಚುನಾವಣೆಗೆ ಸಕಲ ಸಿದ್ದತೆ: ಮಸ್ಟರಿಂಗ್ ಕಾರ್ಯ ನಡೆಸಿದ ಜಿಲ್ಲಾಡಳಿತ

ಹುಬ್ಬಳ್ಳಿ: ನಾಳೆ ನಡೆಯಲಿರುವ ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಕಳೆದ 20 ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ತೊಡಗಿದ್ದರು. ಆದರೆ ಈ ಬಹಿರಂಗ ಪ್ರಚಾರ ಅಂತಿಮಗೊಂಡಿದೆ. ಅಲ್ಲದೆ ಇಂದು ಜಿಲ್ಲಾಡಳಿತದಿಂದ ಚುನಾವಣೆ ಹಿನ್ನಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಸಲಾಯಿತು.

ನಾಳೆ ಮುಂಜಾನೆ 8 ರಿಂದ ಸಂಜೆ 4 ರ ವರೆಗೆ ಮತದಾನ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಮತಪೆಟ್ಟಿಗೆಗಳನ್ನು ಪಡೆದುಕೊಂಡು ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗೆ ತೆರಳುತ್ತಿದ್ದಾರೆ. ಪ್ರತಿ ಬೂತ್‌ಗೆ ಒಬ್ಬ ಮೈಕೋ ವೀಕ್ಷಕರ ನೇಮಕ ಮಾಡಲಾಗಿದೆ.

ಇನ್ನೂ ಗದಗ, ಹಾವೇರಿ ಮತ್ತು ಧಾರವಾಡ ಸೇರಿ ಒಟ್ಟು 504 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 2165 ( 1054 ಪುರುಷ , 1111 ಮಹಿಳಾ ) , ಗದಗ ಜಿಲ್ಲೆಯಲ್ಲಿ 1969 ( 969 ಪುರುಷ , 1000 ಮಹಿಳಾ ಹಾಗೂ ಹಾವೇರಿ ಜಿಲ್ಲೆಯಲ್ಲಿ 3360 ( 1636 ಪುರುಷ 1733 ಮಹಿಳಾ) ಒಟ್ಟು 7501 ಮತದಾರರು ನಾಳೆ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾವಣೆ ಮಾಡಲಿದ್ದಾರೆ.

Edited By : Manjunath H D
Kshetra Samachara

Kshetra Samachara

09/12/2021 01:46 pm

Cinque Terre

41.77 K

Cinque Terre

0

ಸಂಬಂಧಿತ ಸುದ್ದಿ