ಕುಂದಗೋಳ : ತಾಲೂಕಿನ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

ಕುಂದಗೋಳ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ ಅವರು ಇಂದು ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿ ಕೈಗೊಂಡಿರುವುದನ್ನು ಪರಿಶೀಲನೆ ನಡೆಸಿದರು.

ಮೊದಲು ನರೇಗಾ ಯೋಜನೆ ಅಡಿ ಬಸಾಪುರ ಗ್ರಾಮದಲ್ಲಿ ಕೆರೆ ಹೊಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿಕಾರರ ಜೊತೆ ಸಂವಾದ ನಡೆಸಿದ ಅವರು ವಯೋವೃದ್ಧರು ಹಾಗೂ ಕೆಲಸಕ್ಕೆ ಹಾಜರಾದ ಪದವೀಧರ ವಿದ್ಯಾರ್ಥಿಗಳ ಜೊತೆ ಮಾತನಾಡಿ ಅವರಿಂದ ಮಾಹಿತಿ ಕಲೆಹಾಕಿ ಲಾಕ್ ಡೌನ್ ಅವಧಿಯಲ್ಲಿ ನರೇಗಾ ಕೆಲಸ ಸದ್ಬಳಕೆ ಮಾಡಿಕೊಂಡಿದ್ದಕ್ಕೆ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ 41 ಲಕ್ಷದ ಕೊಂಕಣಕುರಹಟ್ಟಿ, 35 ಲಕ್ಷದ ಕೊಡ್ಲಿವಾಡ, 29 ಲಕ್ಷದ ಬಸಾಪೂರ, ಗ್ರಾಮಗಳಲ್ಲಿ ವ್ಯವಸ್ಥೆ ಮಾಡಲಾದ ಮನೆ ಮನೆಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಜಲ ಜೀವನ್ ಮೀಷನ್ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ ಶೀಘ್ರವೇ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿ, ಕಾರ್ಯ ನಿರ್ವಾಹಕ ಅಭಿಯಂತರ ವೀರಕರ್, ಅಭಿಯಂತರ ಐಸಿಸಿ ಕೋರ್ಡಿನೇಟರ್ ಬಿರಾದಾರ ಹಾಗೂ ತಾಪಂ ಇತರ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Kshetra Samachara

Kshetra Samachara

14 days ago

Cinque Terre

43.77 K

Cinque Terre

0