ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಬೈಪಾಸ್ ಅಗಲೀಕರಣಕ್ಕೆ 1,200 ಕೋಟಿ: 18 ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ

ಹುಬ್ಬಳ್ಳಿ: ಹು-ಧಾ ಬೈಪಾಸ್ ಅಗಲೀಕರಣದ ಕಾರ್ಯ ಪ್ರಕ್ರಿಯೆ ಚುರುಕುಗೊಂಡಿದ್ದು, ಇಟಿಗಟ್ಟಿ ಅಪಘಾತ ಪ್ರಕರಣದ ಬೆನ್ನಲ್ಲೇ ಇಂತಹದೊಂದು ತೀರ್ಮಾನ ಕೈಗೊಂಡಿರುವುದಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಜನರು ಧನ್ಯವಾದ ತಿಳಿಸಿದ್ದಾರೆ.

ಹೌದು. ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿ.ಮೀ. ಅಗಲೀಕರಣದ ಕಾಮಗಾರಿಗೆ 1,200 ಕೋಟಿ ಹಣವನ್ನು ಮೀಸಲಿಟ್ಟಿದ್ದು, 30 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವ ಅವಶ್ಯಕತೆ ಇದ್ದು, ಭೂಮಿಯನ್ನು ಸ್ವಾಧೀನ ಪಡೆಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲು ಸೂಚನೆ ನೀಡಲಾಗಿದೆ.

ಇನ್ನೂ ದಾವಣಗೆರೆ ಮೂಲದ ಮಹಿಳೆಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ವರದಿಯನ್ನು ಕೇಳಿತ್ತು. ಅಲ್ಲದೆ ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ ಜೋಶಿ ಅವರು ಮುತುವರ್ಜಿಯಿಂದ ಕಾರ್ಯ ಕೈಗೆತ್ತಿಕೊಂಡಿದ್ದು, 18 ತಿಂಗಳಲ್ಲಿಯೇ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

Edited By : Vijay Kumar
Kshetra Samachara

Kshetra Samachara

12/02/2021 09:54 pm

Cinque Terre

22.72 K

Cinque Terre

14

ಸಂಬಂಧಿತ ಸುದ್ದಿ