ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾರ್ವಜನಿಕರು ಲಿಖಿತವಾಗಿ ದೂರು ಕೊಟ್ಟರೆ ಲಂಚಕೋರರ ಸಸ್ಪೆಂಡ್; ಮೇಯರ್

ಮಹಾನಗರ ಪಾಲಿಕೆ ವಲಯ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ವಿಚಾರದ ಹಿನ್ನಲೆಯಲ್ಲಿ, ಇಂತಹ ಅಧಿಕಾರಿಗಳೇ ಲಂಚ ಪಡೆಯುತ್ತಿದ್ದಾರೆಂದು ಯಾರಾದರೂ ಬಂದು ಲಿಖಿತವಾಗಿ ಕೊಟ್ಟರೆ ನಾನು ತಕ್ಷಣವೇ ಅವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇನೆ ಎಂದು ಹು-ಧಾ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಹೇಳಿದರು.

ಸಭೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲರೂ ಕೇವಲ ಫೋನ್ ಮೂಲಕ ಇಂತವ ದುಡ್ಡು ತೆಗೆದುಕೊಂಡಿದ್ದಾರೆ ಎನ್ನುತ್ತಾರೆಯೇ ಹೊರತು, ಯಾರೂ ಲಿಖಿತವಾಗಿ ಬರೆದು ಕೊಟ್ಟಿಲ್ಲಾ! ಲಿಖಿತವಾಗಿ ಬರೆದು ಕೊಟ್ಟ ಮೇಲೆ ನಾನು ಆ ಲಂಚಕೋರರ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದರು.

ಪಾಲಿಕೆ ಸದಸ್ಯರು ಹೇಳುವ ಪ್ರಕಾರ ಇ-ಸ್ವತ್ತು ಮಾಡಿಸಬೇಕಾದರೆ ಅಧಿಕಾರಿಗಳು ಸಾವಿರಾರು ರೂ. ಲಂಚ ಕೇಳುತ್ತಿದ್ದಾರೆಂದು ಆರೋಪಗಳು ಕೇಳಿ ಬಂದಿವೆ. ಇವೆಲ್ಲವನ್ನೂ ಆಲಿಸಿ ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಬೇಕೆಂದು ಪಾಲಿಕೆ ಆಯುಕ್ತರಿಗೆ ತಿಳಿಸಿದ್ದೇನೆ ಎಂದರು.

Edited By :
Kshetra Samachara

Kshetra Samachara

29/07/2022 05:43 pm

Cinque Terre

32.85 K

Cinque Terre

7

ಸಂಬಂಧಿತ ಸುದ್ದಿ