ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕುಡಿಯುವ ನೀರು ಸರಬರಾಜು ಖಾಸಗೀಕರಣ ವಿರೋಧಿಸಿ ಎಎಪಿ ಧರಣಿ; ನಿರ್ಧಾರಕ್ಕೆ ಧಿಕ್ಕಾರ

ಕುಡಿಯುವ ನೀರು ಸರಬರಾಜು ವ್ಯವಸ್ಥೆ ಖಾಸಗೀಕರಣ ರದ್ದತಿಗೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿ ಧರಣಿ ನಡೆಸಲಾಯಿತು.

ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿ ಎಲ್ಲ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರದಲ್ಲಿ ಈಗ ಹು-ಧಾ ನೀರಿನ ಸರಬರಾಜು ಕೂಡ ಖಾಸಗಿ ಕಂಪನಿಗೆ ಕೊಡುವ ನಿರ್ಧಾರ ತೆಗೆದುಕೊಂಡಿರುವುದು ಕಂಡುಬಂದಿದೆ.

ಈಗ ನೀರಿನ ಸರಬರಾಜು ವ್ಯವಸ್ಥೆ ಎಲ್ & ಟಿ ಕಂಪನಿಗೆ ಕೊಟ್ಟಿದ್ದು ಈ ಖಾಸಗೀಕರಣದಿಂದಾಗಿ ನೀರು ಕೂಡ ದುಬಾರಿಯಾಗಿ ಜನಸಾಮಾನ್ಯರು ಕುಡಿಯುವ ನೀರಿಗಾಗಿಯೂ ಕೂಡ ಹೆಣಗಾಡುವ ಆವಸ್ತೆಯಾಗುವ ಲಕ್ಷಣ ಕಾಣುತ್ತಿದೆ. ಈ ಹೊಸ ತ್ರಿ ಪಕ್ಷಿಯ ಒಪ್ಪಂದದ ಅನ್ವಯ ಸಾರ್ವಜನಿಕ ನಳಗಳು ಮಾಯವಾಗಿ ಬಡವರಿಗೆ ನೀರು ಸಿಗದಷ್ಟು ಆಗುವ ಸಾಧ್ಯತೆ ಹೆಚ್ಚು ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Edited By :
Kshetra Samachara

Kshetra Samachara

24/06/2022 03:54 pm

Cinque Terre

24.38 K

Cinque Terre

6

ಸಂಬಂಧಿತ ಸುದ್ದಿ