ಕಲಘಟಗಿ:ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಜಾತಿಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡ ಬೇಕಿದೆ.
ಗ್ರಾ ಪಂ ಚುನಾವಣೆಯಲ್ಲಿ ಮೀಸಲಾತಿ ಅನುಸಾರ ಸ್ಪರ್ಧಿಸಲು ಜಾತಿ ಆದಾಯ ಪ್ರಮಾಣ ಪತ್ರವನ್ನು ಪಟ್ಟಣದಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯ ಬೇಕಾಗಿದೆ.ಆದರೆ ತಹಶಿಲ್ದಾರ ಕಚೇರಿಯಲ್ಲಿ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಎಲ್ಲ ವರ್ಗಗಳ ಆಕಾಂಕ್ಷಿಗಳು ಒಂದೇ ಕಡೆ ಜಮಾಯಿಸುತ್ತಿರುವುದರಿಂದ ನೂಕುನುಗ್ಗಲು ಉಂಟಾಗಿದೆ.
ನಾಮಪತ್ರ ಸಲ್ಲಿಸಲು ಎರಡೇ ದಿನ ಬಾಕಿ ಇರುವುದರಿಂದ ತಹಶೀಲ್ದಾರ ಕಚೇರಿಯಲ್ಲಿ ಸಂಜೆಯ ಸಮಯದಲ್ಲಿಯೂ ಜನಸಂದಣಿ ಹೆಚ್ಚಾಗಿತ್ತು.ಕೊರೋನಾ ಸಮಯದಲ್ಲಿ ಸರಕಾರಿ ಕಚೇರಿಯಲ್ಲಿ ಸಾಮಾಜಿಕ ಅಂತರ ಮರೆಯಾಗಿದೆ.
Kshetra Samachara
09/12/2020 07:16 pm