ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಮಾಡಿರುವ ಗೋರಕ್ಷಣಾ ಕಾನೂನು ಅವ್ಯವಹಾರಿಕವಾಗಿದೆ- ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್

ಹುಬ್ಬಳ್ಳಿ- ಪ್ರಜಾಸತ್ತಿಯ ವೇಷದಲ್ಲಿ ಸರ್ವಾಧಿಕಾರಿ ಆಡಳಿತ ಈ ದೇಶದಲ್ಲಿ ನೆಡೆಯುತ್ತಿದೆ. ಸರ್ವಾಧಿಕಾರಿ ಧೋರಣೆಯಿಂದ ರೈತರ ಶಕ್ತಿಯ ನಾಶಗೊಳಿಸುವ ದುರುದ್ದೇಶ ನೆಡಯುತ್ತಿದೆ. ಈ ಸರ್ವಾಧಿಕಾರಿ ದುರುದ್ದೇಶ ನೀತಿಯ ವಿರುದ್ಧ ಪ್ರತಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಜಾಥಾ ಮೂಲಕ ಪ್ರತಿಭಟನೆ ನೆಡಸುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಹೇಳಿದರು...

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡಿರುವ ಗೋರಕ್ಷಣಾ ಕಾನೂನು ಅವ್ಯವಹಾರಿಕವಾಗಿದೆ.

ಈ ಕಾನೂನ ಮೂಲಕ ನಾವು ಗೋವುಗಳನ್ನು ಸಾಕಲು ಸಾಧ್ಯವಿಲ್ಲ ಒಂದು ವೇಳೆ ಈ ಕಾನೂನು ಜಾರಿಗೆ ತಂದಿದ್ದೆ ಆದಲ್ಲಿ ನಮ್ಮಮನೆಯ ಗೋವುಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಪ್ಪಿಸಿ ಬರುತ್ತೇವೆ ಎಂದರು.

ನನ್ನ ಪ್ರಕಾರ ಆ ಕಾನೂನು ಪಾಸ್ ಆಗಿಲ್ಲಾ, ಒಂದುವೇಳೆ ಕಾನೂನು ಪಾಸ್ ಆಗಿದ್ರೆ ಅದನ್ನು ಹಿಂಪಡೆಯಬೇಕು ಇದರಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತವಾಗಿದೆ. ಈ ಕಾನೂನು ಹಿಂಪಡೆಯಲಿಲ್ಲ ಅಂದ್ರೆ ನಾವೆಲ್ಲಾ ಗೋವುಗಳನ್ನು ಜಿಲ್ಲಾಧಿಕಾರಿ ಕಛೇರಿ ಎದುರು ನಿಲ್ಲಿಸುತ್ತೇವೆ ಅದಕ್ಕೆ ಅವರೇ ಜವಾಬ್ದಾರಿ ಎಂದರು.

Edited By : Manjunath H D
Kshetra Samachara

Kshetra Samachara

23/01/2021 04:43 pm

Cinque Terre

39.76 K

Cinque Terre

6

ಸಂಬಂಧಿತ ಸುದ್ದಿ