ಕುಂದಗೋಳ: ಅಬ್ಬಾ.. ತಾಲೂಕು ಆಡಳಿತ ಅದರಲ್ಲೂ ಕಂದಾಯ ಇಲಾಖೆಯ ಉಪ ತಹಶೀಹಲ್ದಾರ್ ಕಚೇರಿ ಕಟ್ಟಡದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬರ್ತಾರೆ ಅಂದ್ರೇ ಆ ಕಾರ್ಯಕ್ರಮ ಹೀಗಾ ಆಗೋದಾ.?
ಅಯ್ಯೋ.! ಏನಾಯ್ತು ಅಂದ್ರಾ.? ಇದೋ ಇಲ್ನೋಡಿ ಸಚಿವರು ಬಂದ್ರೂ ಇಲಾಖೆ ಆವರಣದ ಕುರ್ಚಿ ಖಾಲಿ ಖಾಲಿಯಾಗಿದ್ವು. ಇನ್ನೂ ಸಚಿವರಿಗೆ ಸಮಸ್ಯೆಗಳನ್ನ ತಿಳಿಸುವ ಬದಲಾಗಿ ಸನ್ಮಾನ ಫೋಟೋ ಪೋಸ್‌ಗೆ ಜನ ಮುಗಿಬಿದ್ದರು. ಸಚಿವರ ಕಾರ್ಯಕ್ರಮದಲ್ಲಿ ಕುಡುಕರೇ ಅತಿಯಾಗಿದ್ದು, ಸ್ವತಃ ಅಧಿಕಾರಿಗಳೇ ಅವರನ್ನು ಕರೆದೊಯ್ಯುವ ದೃಶ್ಯ ಕಂಡು ಬಂದವು. ಇದರ ನಡುವೆ ಮದ್ಯಪ್ರಿಯನೊಬ್ಬ ಜೈ ಕಾಂಗ್ರೆಸ್, ಕಾಂಗ್ರೆಸ್ ಅಕ್ಕಿ ಕೊಟ್ಟಿದೆ ಎಂದು ಕೂಗುವ ಧ್ವನಿ ಜನರನ್ನು ನಗುವಂತೆ ಮಾಡಿತು.
ಇನ್ನು ವಿಶೇಷವೆಂದರೆ ಸಚಿವರಿಗಾಗಿ ವೇದಿಕೆ ಮೇಲೆ ಪ್ಲೇಟ್ ತುಂಬಿ ಇಟ್ಟಿದ್ದ ಗೋಡಂಬಿಯನ್ನು ಕಾಗೆ ಬಂದು ತೆಗೆದುಕೊಂಡು ಹೋಗ್ತಾ ಇದ್ರೇ ಈ ಅಧಿಕಾರಿಗಳು ಕಾಗೆ ಓಡಿಸ್ತಾ ಇದ್ರೂ. ಸ್ವತಃ ತಹಶೀಲ್ದಾರ್ ಹಾಗೂ ಸಚಿವ ಹಾಲಪ್ಪ ಆಚಾರ ಮಾತನಾಡುವ ವೇಳೆ ಪದೇ ಪದೇ ಮೈಕ್ ಕೊಟ್ಟಿತು. ಇದು ತಹಶೀಲ್ದಾರರ ಕಾರ್ಯಕ್ರಮದ ರೂಪುರೇಷವನ್ನ ವಿವರಿಸುವಂತಿತ್ತು.
ಇದರ ನಡುವೆ ಅಭಿವೃದ್ಧಿ ಭಾಷಣದಲ್ಲೇ ಹೆಚ್ಚು ಸಮಯ ಕಳೆದ ಸಚಿವರು ರೈತ ಸಂಘಟನೆ ಹಾಗೂ ಗ್ರಾಮಸ್ಥರ ಮನವಿ, ಸಮಸ್ಯೆ ಆಲಿಸಲೇ ಇಲ್ಲಾ...
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
25/07/2022 10:26 pm