ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನಮ್ಮ ನಡೆ ಹಳ್ಳಿಯ ಸರಕಾರಿ ಶಾಲೆಯ ಶಿಕ್ಷಣದ ಕಡೆ

ನವಲಗುಂದ : ನಮ್ಮ ನಡೆ ಹಳ್ಳಿಯ ಸರಕಾರಿ ಶಾಲೆಯ ಶಿಕ್ಷಣದ ಕಡೆ ಘೋಷಣೆಯೊಂದಿಗೆ ನವಲಗುಂದ ತಾಲ್ಲೂಕಿನ ಪಡೆಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ರಿಯಾಜ್ ಸವದತ್ತಿಯವರು ಸ್ನೇಹ ಜೀವಿ ಸೇವಾ ಸಂಸ್ಥೆಯಿಂದ ಕೊಡಲಾದ ನೋಟಪುಸ್ತಕಗಳನ್ನು ವಿತರಿಸಿದರು.

ಈ ವೇಳೆ ನವಲಗುಂದ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಅವರು ಮಾತನಾಡಿ, ನಾವೆಲ್ಲ ಸರಕಾರಿ ಶಾಲೆಯಲ್ಲಿ ಕಲಿತು ಮುಂದೆ ಬಂದಿದ್ದೇವೆ, ನೀವು ನಿಮ್ಮೂರಿನ ಶಾಲೆಯಲ್ಲಿ ಕಲಿತು ಉತ್ತಮ ಪ್ರಜೆಯಾಗಬೇಕು, ಉನ್ನತ ಹುದ್ದೆಯ ಅಧಿಕಾರಿಯಾಗಬೇಕು ಇಲ್ಲವೆ ಪ್ರಗತಿಪರ ರೈತರಾಗಬೇಕು ಎಂದರು.

ಈ ಸಂದರ್ಭದಲ್ಲಿ ನವಲಗುಂದ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ, ರಿಯಾಜ್ ಸವದತ್ತಿ, ವಿನೋದ ಅಸೂಟಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಜೀವನ ಪವಾರ, ಮಹಾಂತೇಶ ಗುನ್ನಾರ, ಸೋಮೇಶ ತೋಟದ, ಚನ್ನಪ್ಪ ಸವದಿ, ರಮೇಶ ನವಲಗುಂದ, ಮಾರುತಿ ತುರಮರಿ, ವೀರನಗೌಡ ಧರ್ಮಗೌಡ್ರ, ಎಸ್.ಎಮ್. ಮೆಣಸಿನಕಾಯಿ ಹಾಗೂ ಗ್ರಾಮದ ಹಿರಿಯರು,ಯುವಕರು ಶಾಲಾ ಮಕ್ಕಳು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

02/07/2022 03:05 pm

Cinque Terre

12.9 K

Cinque Terre

0

ಸಂಬಂಧಿತ ಸುದ್ದಿ