ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕುಮಾರಸ್ವಾಮಿ ಕಾರು ಬೆನ್ನು ಹತ್ತಿದವನಿಗೆ ಬಿತ್ತು ಗೂಸಾ

ಧಾರವಾಡ: ಐವತ್ತಾರೂ ಜನ ಪಿಎಸ್ಐ ಅಭ್ಯರ್ಥಿಗಳಿಗೆ ಅನ್ಯಾಯವಾಗಿಲ್ಲ ಎಂದು ಹೇಳಿಕೆ ಕೊಟ್ಟ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪಿಎಸ್ಐ ಅಭ್ಯರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಿದ್ದ ಕುಮಾರಸ್ವಾಮಿ ಅವರಿಗೆ ಪಿಎಸ್ಐ ಅಭ್ಯರ್ಥಿಗಳು ಮನವಿ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಅವರು ಐವತ್ತಾರೂ ಸಾವಿರ ಜನ ಪಿಎಸ್ಐ ಅಭ್ಯರ್ಥಿಗಳಿಗೆ ಅನ್ಯಾಯವಾಗಿಲ್ಲ 545 ಜನರಿಗೆ ಮಾತ್ರ ಅನ್ಯಾಯವಾಗಿದೆ ಎಂದು ಹೇಳಿಕೆ ಕೊಟ್ಟರು. ಕುಮಾರಸ್ವಾಮಿ ಅವರ ಈ ಹೇಳಿಕೆ ಸರಿಯಲ್ಲ ಎಂದು ಅಭ್ಯರ್ಥಿಗಳು ಅವರ ವಿರುದ್ಧ ಧರಣಿಗಿಳಿದರು.

ಅಲ್ಲದೇ ಅವರು ಕವಿವಿಯಿಂದ ಮರಳಿ ಹೋಗುವ ಸಂದರ್ಭದಲ್ಲಿ ಅವರಿಗೆ ಘೇರಾವ್ ಹಾಕಿದ ಅಭ್ಯರ್ಥಿಗಳು, ಕುಮಾರಸ್ವಾಮಿ ಅವರ ಕಾರಿಗೆ ಬೆನ್ನು ಹತ್ತಿ ಅವರ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಪೊಲೀಸರು ಹಾಗೂ ಕುಮಾರಸ್ವಾಮಿ ಅವರ ಅಂಗರಕ್ಷಕರು ಕೆಲ ಪಿಎಸ್ಐ ಅಭ್ಯರ್ಥಿಗಳಿಗೆ ಗೂಸಾ ಸಹ ನೀಡಿದರು. ಅಭ್ಯರ್ಥಿಗಳ ಈ ರೀತಿಯ ಪ್ರತಿಭಟನೆಯಿಂದ ಕುಮಾರಸ್ವಾಮಿ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಅಲ್ಲಿಂದ ಹೊರಟು ಹೋದರು.

ಕೆಲ ಕಾಲ ಪೊಲೀಸರು ಮತ್ತು ಪಿಎಸ್ಐ ಅಭ್ಯರ್ಥಿಗಳ ಮಧ್ಯೆ ತೀವ್ರ ವಾಗ್ವಾದ ಕೂಡ ನಡೆಯಿತು. ಅಲ್ಲದೇ ಕುಮಾರಸ್ವಾಮಿ ಹೋಗುತ್ತಿದ್ದಂತೆ ಕೆಲ ಅಭ್ಯರ್ಥಿಗಳು ಮೋದಿ.. ಮೋದಿ ಎಂದು ಘೋಷಣೆಗಳನ್ನೂ ಕೂಗಿದರು.

Edited By :
Kshetra Samachara

Kshetra Samachara

04/06/2022 02:26 pm

Cinque Terre

22.39 K

Cinque Terre

1

ಸಂಬಂಧಿತ ಸುದ್ದಿ