ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 40 ವರ್ಷದ ನಾಗಲೋಟದ ಗೆಲುವಿಗೆ ಬಿಸಿ ಮುಟ್ಟಿಸಲು ನಿರ್ಧಾರ ಮಾಡಿದ ಶಿಕ್ಷಕರ ಒಕ್ಕೂಟ

ಹುಬ್ಬಳ್ಳಿ-ಧಾರವಾಡ ಶಿಕ್ಷಕರ ಚುನಾವಣೆಗೆ ದಿನಗಣನೆ ಆರಂಭ ಆಗಿದೆ. ಈ ಮಧ್ಯೆ ಪಕ್ಷಗಳಿಕೆ ಠಕ್ಕರ್ ಕೊಡಲು ಮತ್ತೊಂದು ಬಣ ಸಜ್ಜಾಗಿದೆ. ನಲವತ್ತು ವರ್ಷದಿಂದ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಬಸವರಾಜ ಹೊರಟ್ಟಿ ಅವರಿಗೆ ನಡುಕ ಶುರುವಾಗಿದೆ.

ಹುಬ್ಬಳ್ಳಿ-ಧಾರವಾಡ ಶಿಕ್ಷಕರ ಕ್ಷೇತ್ರ ಜೆಡಿಎಸ್ ಬಾಹ್ಯವುಳ್ಳ ಕ್ಷೇತ್ರ. ಜೊತೆಗೆ ಕಳೆದ 40 ವರ್ಷದಿಂದ ಜೆಡಿಎಸ್ ತೆಕ್ಕೆಯಲ್ಲಿದೆ. ಆ ಶಿಕ್ಷಕರ ಕ್ಷೇತ್ರಕ್ಕೀಗ ಚುನಾವಣೆಗೂ ಮುನ್ನ ಕಂಟಕ ಎದುರಾಗಿದ್ದು, ಸಭಾಪತಿ ಹೊರಟ್ಟಿಗೆ ನಡುಕ‌ ಶುರು ಆಗಿದೆ. ಪರಿಷತ್ ಹಾಲಿ ಸಭಾಪತಿ ಬಸವರಾಜ್ ಹೊರಟ್ಟಿ ಈ ಕ್ಷೇತ್ರವನ್ನ ಪ್ರತಿನಿಧಿಸುತ್ತಾರೆ. ಕಳೆದ ಸುಮಾರು ವರ್ಷದಿಂದ ಇದೇ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆ ಆಗಿದ್ದಾರೆ. ಆದರೀಗ ಎಂಎಲ್‌ಸಿ ಹೊರಟ್ಟಿ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಸಭಾಪತಿ ವಿರುದ್ಧವೆ ಹುಬ್ಬಳ್ಳಿ ಧಾರವಾಡ ಶಿಕ್ಷಕ ಮತದಾರರು ತಿರುಗಿ ಬಿದ್ದಿದ್ದಾರೆ. ಚುನಾವಣೆಗೂ ಮೊದಲು ಶಾಸಕರು ದೊಡ್ಡ ದೊಡ್ಡ ಆಶ್ವಾಸನೆ ನೀಡ್ತಾ ಬಂದಿದ್ದಾರೆ. ಗೆಲ್ಲುವವರೆಗೆ ನಮ್ಮನ್ನ ಬಳಸಿಕೊಳ್ಳುತ್ತಾರೆ. ಎಲೆಕ್ಷನ್ ಗೆದ್ದ ಬಳಿಕ ಇತ್ತ ತಲೆ ಕೂಡಾ ಹಾಕಿ ಮಲಗುತ್ತಿಲ್ಲ. ಜೊತೆಗೆ ಶಿಕ್ಷಕರಿಗೆ ಕಾಲ್ಪನಿಕ ವೇತನ ಹಾಗೂ ಪಿಂಚಣಿ ವ್ಯವಸ್ಥೆ ಜೊತೆಗೆ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಕೊಡ್ತೇವೆ ಅಂದಿದ್ದರು. ಆದರೆ ಇದುವರೆಗೆ ಶಿಕ್ಷಕರ ವರ್ಗಕ್ಕೆ‌ ನೀಡಿದ ಯಾವುದೇ ಒಂದು ಬೇಡಿಕೆಯೂ ಇಡೇರಿಲ್ಲ ಅಂತ ಹುಬ್ಬಳ್ಳಿ ಧಾರವಾಡ ಶಿಕ್ಷಕರ ಒಕ್ಕೂಟ ಸಭಾಪತಿ ಹೊರಟ್ಟಿ ವಿರುದ್ಧ ಅಸಮಾಧಾನ ಹೊರ ಹಾಕಿದೆ.

ಶಿಕ್ಷಕರಿಗೆ ಕನಿಷ್ಠ ಮೂಲ ವೇತನ ನೀಡುವುದಕೆ 2005ರಲ್ಲೆ ಆದೇಶ ಆಗಿದೆ. ಧಾರವಾಡ ಹೈಕೋರ್ಟ್ 2018ರಲ್ಲಿ ಸರ್ಕಾರ ಆದೇಶ ಕಡ್ಡಾಯ ಮಾಡಬೇಕು ಅಂತಲೂ ಹೇಳಿದೆ. ಅದರೆ ಅದು ಜಾರಿಯೇ ಆಗೇ ಇಲ್ಲ. ಜೊತೆಗೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಅವಧಿಗೂ ಮೊದಲೆ ಶಿಕ್ಷಕರನ್ನು ವೃತ್ತಿಯಿಂದ ವಜಾ ಮಾಡಿದ್ದಾರೆ. ಆದರೆ ಅವರಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಮ್ಮಿಂದ ವೋಟ್ ತೆಗೆದುಕೊಂಡು ನೀವು ಯಾರಿಗಾಗಿ ಕೆಲಸ ಮಾಡ್ತಿದ್ದಿರಿ. ನಮ್ಮ ಜ್ವಲಂತ ಸಮಸ್ಯೆ ಸಮಸ್ಯೆ ಆಗಿಯೇ ಉಳಿದೆ. ರಾಜ್ಯದ 5 ಲಕ್ಷ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಇದೇ ರೀತಿ ರೋಷಿ ಹೋಗಿವೆ. ಈಗಲಾದ್ರೂ ಕಾಲ ಮಿಂಚಿಲ್ಲ. ಎಲೆಕ್ಷನ್ ಹತ್ತಿರ ಬರ್ತಿದೆ. ಅದಕ್ಕೂ ಮೊದಲೆ ನಮ್ಮ ಬೇಕು ಬೇಡಿಕೆಗಳನ್ನ ಇಡೇರಿಸಬೇಕು. ಇಲ್ಲವಾದಲ್ಲಿ ಶಿಕ್ಷಕರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ತಕ್ಕ ಪಾಠ ಕಲಿಸುತ್ತೇವೆ ಅಂತ ಶಿಕ್ಷಕರ ಒಕ್ಕೂಟ ರಾಜ್ಯ ಸರ್ಕಾರ ವಿರುದ್ಧ ಗರಂ ಆಗಿದೆ.

ಶಿಕ್ಷಕರ ಬೇಡಿಕೆ ಇಡೇರಿಸದ ಸಭಾಪತಿ ಹೊರಟ್ಟಿ ವಿರುದ್ಧ ಎಲೆಕ್ಷನ್ ಗೂ ಮೊದಲೆ ಅಸಮಾಧಾನ‌ ವ್ಯಕ್ತ ಆಗಿದೆ. ಇದು ಮುಂದಿನ‌ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕು.

Edited By :
Kshetra Samachara

Kshetra Samachara

29/03/2022 03:33 pm

Cinque Terre

21.42 K

Cinque Terre

0

ಸಂಬಂಧಿತ ಸುದ್ದಿ