ಹುಬ್ಬಳ್ಳಿ: ಉಕ್ರೇನ್ ಹಾಗೂ ರಷ್ಯಾ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿರುವ ಭಾರತೀಯರು ಪ್ರತಿಯೊಬ್ಬರು ಸುರಕ್ಷಿತವಾಗಿ ಬರಬೇಕು. ದುರಾದೃಷ್ಟವಶಾತ್ ಹಾವೇರಿ ಜಿಲ್ಲೆಯ ಹುಡುಗ ಸಾವನ್ನಪ್ಪಿದ್ದಾನೆ. ಹೆತ್ತವರು ತುಂಬಾ ನೊಂದುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಯಾಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಬೇಸರ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪಾಲಕರಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಲಿಸುವ ಶಕ್ತಿಯಿಲ್ಲ. ಅಲ್ಲದೇ ಎಂಬಿಬಿಎಸ್ ಹಾಗೂ ಎಂಡಿ ವ್ಯಾಸಂಗವನ್ನು ಕಡಿಮೆ ಖರ್ಚಿನಲ್ಲಿ ಕಲಿತುಕೊಂಡು ಬರಬಹುದಾಗಿದೆ. ಹಾಗಿದ್ದರೇ ಅದು ನಮ್ಮ ದೇಶದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುವುದು ಪಾಲಕರ ಪ್ರಶ್ನೆಯಾಗಿದೆ ಎಂದರು.
ನೀಟ್ ಬ್ಯಾನ್ ಮಾಡುವಂತೆ ಟ್ವಿಟ್ಟರ್ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನೀಟ್ ಬಂದು ಈಗ ಒಂದು ವರ್ಷ ಆಯ್ತು. ನೀಟ್ ಒಂದೇ ಇದಕ್ಕೆ ಕಾರಣವಲ್ಲ. ನೀಟ್ ಬರುವುದಕ್ಕಿಂತ ಮುಂಚೆಯೇ ಒಂದು ಕೋಟಿ ಎರಡು ಕೋಟಿ ಇತ್ತು. ಈ ಬಗ್ಗೆ ನರೇಂದ್ರ ಮೋದಿಯವರು ಚಿಂತನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಅವರು ಭರವಸೆ ನೀಡಿದರು.
Kshetra Samachara
04/03/2022 12:48 pm