ಹುಬ್ಬಳ್ಳಿ: ಸರ್ವೋದಯ ಶಿಕ್ಷಣ ಟ್ರಸ್ಟಿನ ಅಂಗ ಸಂಸ್ಥೆಯಲ್ಲಿ ಇತ್ತಿಚೆಗೆ ನಡೆದ ಹಲ್ಲೇ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿನಾಯಕ ಮಹಾಸಭಾ ಧಾರವಾಡ ಘಟಕ ಜಿಲ್ಲಾಧ್ಯಕ್ಷ ಮೋಹನ ಗುಡಸಲಮನಿ ಒತ್ತಾಯಿಸಿದರು.
ಸರ್ವೋದಯ ಶಿಕ್ಷಣ ಟ್ರಸ್ಟಿನ ಅಂಗ ಸಂಸ್ಥೆಯಾದ ಹನುಮಂತಪ್ಪ ಮೌಳೇರ ಪ್ರೌಢಶಾಲೆಗೆ ಜ.25 ರಂದು ಮಹಾಸಭಾದ ಸದಸ್ಯರು ಭೇಟಿ ನೀಡಿದ ಸಂದರ್ಶನದಲ್ಲಿ ಅಲ್ಲಿನ ಶಿಕ್ಷಕರು ಸೇರಿದಂತೆ ಮತ್ತಿತರರು ಸೇರಿದಂತೆ ಹಲ್ಲೇ ಮಾಡಿದಲ್ಲದೇ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿ, ಜೀವ ಬೆದರಿಕೆ ಹಾಕಿದ್ದರು. ಈ ಅಹಿತಕರ ಘಟನೆ ನಡೆದು ಸುಮಾರು 20 ದಿನ ಕಳೆದರು ಆರೋಪಗಳನ್ನು ಇನ್ನೂ ಬಂಧನ ಮಾಡಿಲ್ಲ. ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ನಿಷ್ಪಕ್ಷಪಾತ ತನಿಖೆ ಹಾಗೂ ಆರೋಪಿಗಳ ಬಂಧನಕ್ಕೆ ಗಡವು ನೀಡುತ್ತೇವೆ. ಇಲ್ಲದೇ ಹೋದರೆ ದಲಿತ ಸಂಘಟನೆಗಳು ಸೇರಿಕೊಂಡು ಬೀದಿಗಿಳಿದು ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಕೆ ನೀಡಿದರು.
Kshetra Samachara
14/02/2022 05:12 pm