ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೆಕ್ಯಾನಿಕಲ್ ಸ್ಟೂಡೆಂಟ್ ಸಿಎಂ, ಸಿವಿಲ್ ಸ್ಟೂಡೆಂಟ್ ಕೈಗಾರಿಕಾ ಸಚಿವ: ಬಿವ್ಹಿಬಿ ಕಾಲೇಜಿನ ಹೆಮ್ಮೆ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಕೆಎಲ್ಇ ವಿಶ್ವವಿದ್ಯಾಲಯದ ಬಿವ್ಹಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತಿರುವ ವಿದ್ಯಾರ್ಥಿಗಳೇ ಇಂದು ಕಾಲೇಜಿನಲ್ಲಿ ನಡೆದ 75ನೇ ವರ್ಷದ ವರ್ಷಾಚರಣೆ ಹಾಗೂ ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟನೆ ಮಾಡಿದ್ದು,ವಿಶೇಷವಾಗಿದೆ.

ಇದೇ ಕಾಲೇಜಿನಲ್ಲಿ ಕಲಿತಿರುವ ಬಸವರಾಜ ಬೊಮ್ಮಾಯಿಯವರು ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೇ ಮುರಗೇಶ ನಿರಾಣಿಯವರು ಕೂಡ ಇದೇ ಕಾಲೇಜಿನಲ್ಲಿ ಕಲೆತು ಈಗ ಸಚಿವರಾಗಿರುವುದು ಈ ಕಾಲೇಜಿನ ಹೆಮ್ಮೆಯ ಸಂಗತಿಯಾಗಿದೆ.

ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಿರುವ ಬೊಮ್ಮಾಯಿಯವರು ಈಗ ರಾಜ್ಯದ ಸಿಎಂ ಆಗಿದ್ದು, ಸಿವಿಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿದ ಮುರಗೇಶ ನಿರಾಣಿಯವರು ಈಗ ರಾಜ್ಯದ ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವರಾಗಿದ್ದು, ಇಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಇನ್ನೂ ಕಲಿಸಿದ ಗುರುಗಳಿಂದಲೇ ಸನ್ಮಾನ ಸ್ವೀಕರಿಸಿದ ಇಬ್ಬರು ಸಚಿವರು ಗುರುಗಳ ಪಾದಗಳಿಗೆ ನಮಸ್ಕಾರ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ.

Edited By : Manjunath H D
Kshetra Samachara

Kshetra Samachara

27/09/2021 12:52 pm

Cinque Terre

37.46 K

Cinque Terre

1

ಸಂಬಂಧಿತ ಸುದ್ದಿ