ಹುಬ್ಬಳ್ಳಿ: ಹಿಜಾಬ್ ವಿಚಾರವಾಗಿ ಗಲಾಟೆ ಆಗಬಾರದಿತ್ತು. ವಸ್ತ್ರ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು. ಮಿಲಿಟರಿಯಲ್ಲಿ ನಾವು ಸಮವಸ್ತ್ರ ಧರಿಸಿಕೊಂಡು ಬರಲ್ಲ ಅಂದರೆ ಏನು ಮಾಡುವುದು...? ಪಟ್ಟಭದ್ರ ರಾಜಕೀಯ ಶಕ್ತಿಗಳು ಮಕ್ಕಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಜೊತೆಗೆ ಮಾತನಾಡಿದ ಅವರು, ಭಾರತದಲ್ಲಿ ಒಂದು ಸಂಸ್ಕೃತಿ ಇದೆ. ಕಾಂಗ್ರೆಸ್ ಈ ವಿಚಾರದಲ್ಲಿ ಅದರ ನಿಲುವು ಸ್ಪಷ್ಟಪಡಿಸಲಿ. ನಾವು ಬೇಕಾದರೆ ಕೇಸರಿ ಶಾಲು ಹಾಕದಂತೆ ಹೇಳುತ್ತೇವೆ . ನೀವು ಮುಸ್ಲಿಂ ಮಕ್ಕಳಿಗೆ ಹಿಜಾಬ್ ಧರಿಸದೇ ಬನ್ನಿ ಅಂತ ಕರೆ ಕೊಡುತ್ತೀರಾ? ಎಂದು ಕಾಂಗ್ರೆಸ್‌ಗೆ ಪ್ರಹ್ಲಾದ್ ಜೋಶಿ ಸವಾಲು ಹಾಕಿದರು.
ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳಬೇಕು. ಸರ್ಕಾರ ಜಾಣ್ಮೆಯಿಂದ ಕರ್ತವ್ಯ ನಿರ್ವಹಿಸಿದೆ. ಸಂಯಮದಿಂದ ನಿರ್ವಹಿಸಿದ್ದನ್ನು ಅಶಕ್ತತೆ ಅಂದುಕೊಳ್ಳಬಾರದು. ಕೋಟ್೯ ಆದೇಶ ಪಾಲನೆ ಮಾಡಲ್ಲ ಅಂದರೆ ನಮ್ಮ ಸಂವಿಧಾನದ ಹೊರತು ಇದ್ದೀರಾ...? ಎಂದ ಅವರು, ಕೋಮುಭಾವನೆ, ತುಷ್ಟೀಕರಣ ಜಾಸ್ತಿಯಾಗಿದ್ದಕ್ಕೆ ಪಾಕಿಸ್ತಾನ ನಿರ್ಮಾಣವಾಯಿತು ಎಂದು ಅವರು ಕಿಡಿ ಕಾರಿದರು.
ಜಮೀರ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಮಾತು ಅವರ ಮಾನಸಿಕತೆ ತೋರಿಸುತ್ತದೆ. ಎಲ್ಲಾ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್‌ಗೆ ಕೇಂದ್ರ ಸಚಿವ ಜೋಶಿ ಸವಾಲ್ ಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/02/2022 01:40 pm