ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲ್ಯಾಪ್‌ ಟ್ಯಾಪ್ ಬೇಡಿಕೆಗಾಗಿ ಧರಣಿ; ಚಿಂಚೋರೆ ಬೆಂಬಲ

ಲ್ಯಾಪ್‌ಟಾಪ್‌ಗಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಸ್‌.ಸಿ ಎಸ್‌.ಟಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ ಶುಕ್ರವಾರವೂ ಮುಂದುವರೆದಿದ್ದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕೂಡ ಬೆಂಬಲ ನೀಡಿದ್ದಾರೆ.

ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಈಗಾಗಲೇ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿವೆ. ಆದರೆ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡದೇ ಅನ್ಯಾಯ ಮಾಡುತ್ತಿದೆ. ಅಲ್ಲದೇ ಎಸ್‌.ಸಿ ಎಸ್‌.ಟಿ ವಿದ್ಯಾರ್ಥಿಗಳ ವಿರೋಧಿಯಾಗಿ ಕವಿವಿ ಕೆಲಸ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಕವಿವಿ ಕುಲಪತಿ ವಿರುದ್ಧ ಧಿಕ್ಕಾರ ಕೂಗಿದರು.

ಒಂದು ಕಡೆ ಅತಿಥಿ ಉಪನ್ಯಾಸಕರು, ಇನ್ನೊಂದೇಡೆ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಈಡೇರಿಸಲು ಧರಣಿ ಕುಳಿತಿದ್ದಾರೆ. ಇದು ಕುಲಪತಿಗೆ ನಾಚಿಕೆಗೇಡಿನ ಸಂಗತಿ. ವಿಶ್ವವಿದ್ಯಾಲಯದಲ್ಲಿ ಹಣವಿಲ್ಲ ಎನ್ನುತ್ತಾರೆ. ಆದರೆ, ಒಳಗಿಂದೊಳಗೆ ಎಲ್ಲಾ ಫೈಲ್‌ಗಳಿಗೂ ಸಹಿ ಆಗುತ್ತವೆ. ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಬೀದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ ವಿಶ್ವವಿದ್ಯಾಲಯಕ್ಕೆ ಶಾಪ ತಟ್ಟೇ ತಟ್ಟುತ್ತದೆ ಎಂದ ದೀಪಕ ಚಿಂಚೋರೆ ಗುಡುಗಿದರು.

Edited By :
Kshetra Samachara

Kshetra Samachara

02/09/2022 04:02 pm

Cinque Terre

48.97 K

Cinque Terre

2

ಸಂಬಂಧಿತ ಸುದ್ದಿ