ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕವಿವಿ ಸಿಬ್ಬಂದಿ ಪಿಂಚಣಿಗೆ 18 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ: ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು/ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ 2022-23ನೇ ಸಾಲಿನ ಪಿಂಚಣಿಗಾಗಿ 18.12 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ

ಶುಕ್ರವಾರ ಈ ವಿಚಾರ ತಿಳಿಸಿರುವ ಅವರು, ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದಲೇ ಸಾಕಷ್ಟು ಹಣವನ್ನು ಕ್ರೂಡೀಕರಿಸಿದೆ. ಎದುರಾಗಿದ್ದ ಅಲ್ಪ ಪ್ರಮಾಣದ ಕೊರತೆಯನ್ನು ಹೆಚ್ಚುವರಿ ಅನುದಾನದ ಮೂಲಕ ಬಗೆಹರಿಸಲಾಗಿದೆ ಎಂದಿದ್ದಾರೆ. ಈ ಹಣವನ್ನು ಪಿಂಚಣಿಗೆ ಅಲ್ಲದೆ ಬೇರೆ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಜತೆಗೆ, ಖರ್ಚು ವೆಚ್ಚಗಳ ವಿವರಗಳನ್ನು ವಿ.ವಿ.ಯ ಜಾಲತಾಣದಲ್ಲಿ ನಮೂದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/09/2022 08:00 pm

Cinque Terre

41.24 K

Cinque Terre

2

ಸಂಬಂಧಿತ ಸುದ್ದಿ