ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲೇಜು ನಿರ್ಮಾಣದ ಬೇಡಿಕೆ ಹೊತ್ತು ಶಾಸಕರ ಬಳಿ ಬಂದ ಗ್ರಾಮಸ್ಥರು

ಕುಂದಗೋಳ : ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿ ಸುತ್ತ ಹಳ್ಳಿಗರ ಮಕ್ಕಳ ಅನುಕೂಲಕ್ಕಾಗಿ ಪದವಿ ಮಟ್ಟದ ಕಾಲೇಜು ನಿರ್ಮಿಸುವಂತೆ ಮತ್ತಿಗಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಜೆ.ಅಳಗವಾಡಿಯವರ ನೇತೃತ್ವದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರಿಗೆ ಅವರ ನಿವಾಸದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮತ್ತಿಗಟ್ಟಿ, ಹನುಮನಹಳ್ಳಿ, ರಾಮಾಪುರ, ತೀರ್ಥ ಗ್ರಾಮಗಳ ವಿದ್ಯಾರ್ಥಿಗಳು ಪಿಯುಸಿ ಪದವಿ ವ್ಯಾಸಾಂಗ ಮಾಡಲು ಕುಂದಗೋಳ ಇಲ್ಲವೇ ಹುಬ್ಬಳ್ಳಿಗೆ ಹೋಗಬೇಕು.

ಸದ್ಯದ ಪರಿಸ್ಥಿತಿಯಲ್ಲಿ ಈ ಮಕ್ಕಳಿಗೆ ಈ ಪ್ರಯಾಣ ದೂರವಾಗಿದ್ದು, ಸೂಕ್ತ ಬಸ್ ಸಂಚಾರ ಇರದ ಕಾರಣ ನಿತ್ಯ ತೊಂದರೆಗೆ ಸಿಲುಕುತ್ತಿದ್ದಾರೆ. ಈ ಬಗ್ಗೆ ಶಾಸಕರಿಗೆ ಗ್ರಾಮಸ್ಥರು ಪರಿಸ್ಥಿತಿ ಅವಲೋಕನ ಮಾಡಿದರು.

ನಾಲ್ಕು ಗ್ರಾಮಗಳ ಗ್ರಾಮಸ್ಥರು ಖಾಸಗಿ ವಾಹನ ಮಾಡಿಕೊಂಡು ಶಾಸಕರ ಬಳಿಗೆ ಧಾವಿಸಿ ತಮ್ಮ ಅಹವಾಲನ್ನು ಹೇಳಿ ಕಾಲೇಜು ನಿರ್ಮಿಸಲು ಮನವಿ ಸಲ್ಲಿಸಿದರು.

Edited By : Nirmala Aralikatti
Kshetra Samachara

Kshetra Samachara

01/12/2020 01:03 pm

Cinque Terre

16.74 K

Cinque Terre

0

ಸಂಬಂಧಿತ ಸುದ್ದಿ